ಬೆಂಗಳೂರು;ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ನಡೆದು ಒಂದು ವೇಳೆ ಸಾವನ್ನಪ್ಪಿದ್ದರೆ ತಕ್ಷಣ ಪೊಲೀಸರು ಮೃತದೇಹವನ್ನ ಕವರ್ ಮಾಡಬೇಕು, ಸಾರ್ವಜನಿಕರು ಸ್ಥಳಕ್ಕೆ ಬಂದು ಮೊಬೈಲ್ ನಲ್ಲಿ ಫೋಟೋ ,ಕ್ಯಾಮೆರಾದಲ್ಲಿ ವಿಡಿಯೋ ತೆಗೆಯುವುದನ್ನು ಬ್ಯಾನ್ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದು, ಮಾನವೀಯತೆಯ ದೃಷ್ಠಿಯಿಂದ ಮೃತದೇಹಗಳನ್ನ ಚಿತ್ರೀಕರಣ ಮಾಡುವುದೇ ಬೇಡವೆಂದು ಮನವಿ ಮಾಡಿದ್ದಾರೆ.
ಮೃತದೇಹ ಚಿತ್ರೀಕರಣಕ್ಕೆ ಇನ್ನು ಮುಂದೆ ಬೀಳುತ್ತೆ ಕಡಿವಾಣ... ನಗರ ಪೊಲೀಸ್ ಆಯುಕ್ತರಿಂದ ವಿಭಿನ್ನ ನಿರ್ಧಾರ..! - ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳು ನಡೆದು ಒಂದು ವೇಳೆ ಸಾವನ್ನಪ್ಪಿದ್ದರೆ ತಕ್ಷಣ ಪೊಲೀಸರು ಮೃತದೇಹವನ್ನ ಕವರ್ ಮಾಡಬೇಕು, ಸಾರ್ವಜನಿಕರು ಸ್ಥಳಕ್ಕೆ ಬಂದು ಮೊಬೈಲ್ ನಲ್ಲಿ ಫೋಟೋ, ಕ್ಯಾಮೆರಾದಲ್ಲಿ ವಿಶುವಲ್ ತೆಗೆಯುವುದನ್ನ ಬ್ಯಾನ್ ಮಾಡಬೇಕೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚಿಸಿದ್ದಾರೆ.
ಕೊಲೆ, ಅಪಘಾತ, ಸೂಸೈಡ್, ಅತ್ಯಾಚಾರ ಹೀಗೆ ಹಲವಾರು ಘಟನೆಗಳಿಂದ ಸಾವನ್ನಪ್ಪುವ ವ್ಯಕ್ತಿಗಳ ಪೋಟೋ ,ವಿಡಿಯೋಗಳನ್ನ ಸೆರೆಹಿಡಿಯಲು ಜನ ಮುಂದಾಗ್ತಾರೆ. ಆದ್ರೆ ಇದು ಸಾವನ್ನಪ್ಪಿದ ಮನೆಯವರಿಗೆ ಹಾಗೂ ಅಕ್ಕಪಕ್ಕದ ಜನತೆಗೆ, ಮಕ್ಕಳಿಗೆ ಆಘಾತವಾಗುತ್ತೆ ಅನ್ನೋ ದೃಷ್ಠಿಯಿಂದ ಮೊಬೈಲ್ನಲ್ಲಿ ಮೃತದೇಹವನ್ನ ಸೆರೆಹಿಡಿಯೋದನ್ನ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ.
ಉದ್ಯಮಿ ಸಿದ್ದಾರ್ಥ್ ಮೃತದೇಹ ನೇತ್ರಾವತಿ ನದಿಯ ದಡದಲ್ಲಿ ಪತ್ತೆಯಾಗಿದ್ದ ಸಂದರ್ಭದಲ್ಲಿ ಎಲ್ಲರ ಮೊಬೈಲ್ ,ವಾಟ್ಸಪ್, ಸಾಮಾಜಿಕ ಜಾಲತಾಣದಲ್ಲಿ ಅವರ ಫೋಟೋ ವೈರಲ್ ಆಗಿತ್ತು, ಇದರಿಂದ ಅವರ ಕುಟುಂಬಸ್ಥರಿಗೆ ಬಹಳ ಅಘಾತವಾಗಿತ್ತು, ಈ ಎಲ್ಲಾ ಘಟನೆಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನನೊಂದುಈ ನಿರ್ಧಾರ ಕೈಗೊಂಡಿದ್ದಾರೆ.