ಕರ್ನಾಟಕ

karnataka

ETV Bharat / state

2 ಲಕ್ಷಕ್ಕೂ ಅಧಿಕ ಮಹಿಳೆಯರಿಂದ ಸುರಕ್ಷಾ ಆ್ಯಪ್​​​ ಡೌನ್​ಲೋಡ್​​​: ಪೊಲೀಸ್​​​ ಆಯುಕ್ತರಿಂದ ಅಭಿನಂದನೆ - suraksha app for women

2 ಲಕ್ಷಕ್ಕೂ ಅಧಿಕ ಮಹಿಳೆಯರು ಸುರಕ್ಷಾ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡಿರುವುದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ಹೇಳಿದ್ದಾರೆ.

city-police-commissioner-bhaskar-rao-tweeted
ಸುರಕ್ಷಾ ಆ್ಯಪ್

By

Published : Feb 19, 2020, 5:04 PM IST

ಬೆಂಗಳೂರು:ಮಹಿಳೆಯರ ರಕ್ಷಣೆಗೆಂದೇ ಇರುವ ಸುರಕ್ಷಾ ಆ್ಯಪ್​ಗೆ ಸಿಲಿಕಾನ್ ಸಿಟಿಯಲ್ಲಿ ಮತ್ತೆ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಈವರೆಗೆ 2 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಆ್ಯಪ್ ಡೌನ್​ಲೋಡ್​​ ಮಾಡಿದ್ದಾರೆ.

ಈ ಆ್ಯಪ್ ಡೌನ್​ಲೋಡ್​​ ಮಾಡಿ ತಮ್ಮ ಸುರಕ್ಷತೆ ತಾವು ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇದಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಮತ್ತಷ್ಟು ಜನ ಈ ಆ್ಯಪ್ ಡೌನ್​ಲೋಡ್​ ಮಾಡಿಕೊಳ್ಳುವಂತೆ ಭಾಸ್ಕರ್ ರಾವ್ ಹೇಳಿದ್ದಾರೆ.

ಹಲವು ಜನ ಈ ಆ್ಯಪ್​​ಅನ್ನು ಪ್ರ್ಯಾಂಕ್​ಗಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದ್ರೆ ಈ ಆ್ಯಪ್ ಮಹಿಳೆಯರ ಎಮರ್ಜನ್ಸಿಗಾಗಿ ತಂದಿರೋದು. ಈಗಾಗಲೇ 272 ಹೊಯ್ಸಳ ವಾಹನ ಇದಕ್ಕಂತಲೇ ಕೆಲಸ ಮಾಡುತ್ತಿವೆ. ಇನ್ನೂ 100 ವಾಹನಗಳನ್ನ ಹೆಚ್ಚುವರಿಯಾಗಿ ಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯ ಸುರಕ್ಷಾ ಆ್ಯಪ್​ಗೆ ಬಂದಿರುವ ದೂರುಗಳಲ್ಲಿ ಓಲಾ ಡ್ರೈವರ್​ಗಳ ಅಸಭ್ಯ ವರ್ತನೆಯೇ ಹೆಚ್ಚು. ಶೇ. 15ರಷ್ಟು ಮಹಿಳೆಯರು ನಿಜವಾಗಿ ಕರೆ ಮಾಡಿದ್ರೆ, ಶೇ. 30ರಷ್ಟು ಚೆಕ್ ಮಾಡುವ ಸಲುವಾಗಿ ಮಾಡುತ್ತಿದ್ದಾರೆ. ಮಹಿಳೆಯರೆಲ್ಲರೂ ಈ ಆ್ಯಪ್​ನ ಉಪಯೋಗ ಪಡೆದುಕೊಳ್ಳಬೇಕು ಎಂದು ಭಾಸ್ಕರ್ ರಾವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details