ಬೆಂಗಳೂರು :ನಿರಂತರ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ರೊಟೇಷನ್ ಆಧಾರದಲ್ಲಿ ಒಂದು ವಾರ ರಜೆ ನೀಡಿ ಬಿಗ್ ರಿಲೀಫ್ ನೀಡಿದ ನಗರ ಪೊಲೀಸ್ ಆಯುಕ್ತರು.
ಖುಷಿ ವಿಚಾರ... ಪೊಲೀಸ್ ಸಿಬ್ಬಂದಿಗೆ ಒಂದು ವಾರ ರಜೆ ಘೋಷಿಸಿದ ನಗರ ಪೊಲೀಸ್ ಆಯುಕ್ತ..! - bangalore police news
ಲಾಕೌಡೌನ್ ಹಿನ್ನೆಲೆ ಜನಜಾಗೃತಿ, ವಾಹನಗಳ ಜಪ್ತಿ, ಹಸಿದವರಿಗೆ ಊಟದ ವ್ಯವಸ್ಥೆ, ಭದ್ರತೆ ಹೀಗೆ ನಾನ ರೀತಿಯ ಕೆಲಸದಲ್ಲಿ ಹಗಲು ರಾತ್ರಿ ಎನ್ನದೇ ನಿರತರಾಗಿದ್ದ ಕಾನ್ಸ್ಟೇಬಲ್, ಹೋಂಗಾರ್ಡ್, ಹೆಡ್ ಕಾನ್ಸ್ಟೇಬಲ್, ಎಎಸ್ಐ, ಸಬ್ ಇನ್ಸ್ಪೆಕ್ಟರ್ಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ.
![ಖುಷಿ ವಿಚಾರ... ಪೊಲೀಸ್ ಸಿಬ್ಬಂದಿಗೆ ಒಂದು ವಾರ ರಜೆ ಘೋಷಿಸಿದ ನಗರ ಪೊಲೀಸ್ ಆಯುಕ್ತ..! City Police Commissioner](https://etvbharatimages.akamaized.net/etvbharat/prod-images/768-512-6737410-408-6737410-1586513924874.jpg)
ಲಾಕ್ಡೌನ್ ಹಿನ್ನೆಲೆ ಜನಜಾಗೃತಿ, ವಾಹನಗಳ ಜಪ್ತಿ, ಹಸಿದವರಿಗೆ ಊಟದ ವ್ಯವಸ್ಥೆ, ಭದ್ರತೆ ಹೀಗೆ ನಾನ ರೀತಿಯ ಕೆಲಸದಲ್ಲಿ ಹಗಲು ರಾತ್ರಿ ಎನ್ನದೇ ನಿರತರಾಗಿದ್ದ ಕಾನ್ಸ್ಟೇಬಲ್, ಹೋಂಗಾರ್ಡ್, ಹೆಡ್ ಕಾನ್ಸ್ಟೇಬಲ್, ಎಎಸ್ಐ, ಸಬ್ ಇನ್ಸ್ಪೆಕ್ಟರ್ಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ.
ಈ ಸಂಬಂಧ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪ್ರತಿ ಠಾಣೆಯ ಶೇ.33 ಸಿಬ್ಬಂದಿಗೆ ಒಂದು ವಾರ ರಜೆ ನೀಡಲು ನಗರ ಆಯುಕ್ತರು ತಿಳಿಸಿದ್ದಾರೆ. ಇದು ಸಬ್ ಇನ್ಸ್ಪೆಕ್ಟರ್ ರ್ಯಾಂಕ್ ವರೆಗೂ ರಜೆ ಅನ್ವಯವಾಗುತ್ತೆ. ಸೋಂಕಿತರು, ಶಂಕಿತರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಗೊಳ್ಳುವ ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಠಿಯಿಂದ ಒಂದು ವಾರದ ರಜೆ ನೀಡಲಾಗಿದೆ.ಇದು ಇನ್ನುಳಿದವರಿಗೂ ರೊಟೇಷನ್ ಅನ್ವಯವಾಗಲಿದೆ.