ಕರ್ನಾಟಕ

karnataka

ETV Bharat / state

ಮಹಿಳೆಯರ ರಕ್ಷಣೆಗೆ ಆಯುಕ್ತರ ಹೊಸ ಪ್ಲಾನ್​: ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ - ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ

ಮಹಿಳಾ ಸಿಬ್ಬಂದಿ ಕೊರತೆ ಹಿನ್ನೆಲೆ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಈ ಮ್ಯಾನಿಕ್ಯೂ ಮೂಲಕ ಮಹಿಳೆಯರ ರಕ್ಷಣೆ ಕೂಡ ಮಾಡಲಾಗುತ್ತದೆಯಂತೆ.

decision to build women's manicure
ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ

By

Published : Feb 19, 2020, 5:11 PM IST

ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಪೊಲೀಸರು ಬಹಳಷ್ಟು ಯೋಜನೆಗಳನ್ನ ಮಾಡ್ತಿದ್ದಾರೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಕೊರತೆ ಹಿನ್ನೆಲೆ ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ ಮಾಡಿದ್ದಾರೆ.

ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ಕಮಿಷನರ್ ನಿರ್ಧಾರ

ಈಗಾಗಲೇ ಜನಜಂಗುಳಿ ಇರುವ ಸ್ಥಳಗಳಲ್ಲಿ 200 ಪುರುಷ ಪೊಲೀಸ್ ಮ್ಯಾನಿಕ್ಯೂ ನಿಲ್ಲಿಸಲಾಗಿದೆ. ಅದೇ ರೀತಿ ಮಹಿಳಾ ಮ್ಯಾನಿಕ್ಯೂ ಹೆಚ್ವಿಸಲು ನಿರ್ಧಾರ ಮಾಡಿದ್ದಾರೆ. ಮಹಿಳೆಯರ ಸಂಖ್ಯೆ ಹೆಚ್ವಿರುವ ಶಾಲೆ, ಗಾರ್ಮೆಂಟ್ಸ್​​​​, ಮಾಲ್, ಆಸ್ಪತ್ರೆ, ಪೊಲೀಸ್ ಠಾಣೆ, ಟ್ರಾಫಿಕ್ ಹೆಚ್ಚಿರುವ ಸ್ಥಳಗಳಲ್ಲಿ ಇದನ್ನ ನಿಲ್ಲಿಸಲಾಗುತ್ತೆ. ಇದು ನೋಡಲು ಸೇಮ್ ಪೊಲೀಸರ ರೀತಿನೇ ಇದೆ. ನವೆಂಬರ್ 2019 ರಂದು ಈ ಮ್ಯಾನಿಕ್ಯೂ ಪ್ಲಾನಿಂಗ್​​ನನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಈ ಗೊಂಬೆ ಬೆಲೆ ನಾಲ್ಕರಿಂದ ಐದು ಸಾವಿರ ಇದೆ.

ಸದ್ಯ 50 ರಿಂದ 100 ಗೊಂಬೆಗಳನ್ನ ತಯಾರಿ ಮಾಡಲು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ. ಇನ್ನು ಇದರ ಕುರಿತು ನಗರ ಆಯುಕ್ತರು ಮಾತನಾಡಿ ಮಹಿಳೆಯರ ರಕ್ಷಣೆಗೆ ನಮ್ಮ ‌ಮೊದಲ ಕೆಲಸ. ಸದ್ಯ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಮ್ಯಾನಿಕ್ಯೂ ನಿಲ್ಲಿಸಲು ನಿರ್ಧಾರ ಮಾಡಿದ್ದೀವಿ. ಇದು ಸೇಮ್ ಮಹಿಳಾ ಕಾನ್​​ಸ್ಟೇಬಲ್​​ ರೀತಿನೇ ಇದ್ದು ಮಹಿಳೆಯರ ರಕ್ಷಣೆಗೆ ಇದನ್ನ ಮಾಡಲಾಗಿದೆ ಎಂದರು.

ABOUT THE AUTHOR

...view details