ಕರ್ನಾಟಕ

karnataka

ETV Bharat / state

ತೆರೆದ ಲಸಿಕಾ ಬಾಟಲ್​ಗಳ ಮರುಬಳಕೆ ನಿಷಿದ್ಧ: ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ - ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ನಿರ್ಬಂಧ

ಈ ಹಿಂದೆ ಕೋವಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್ ಓಪನ್ ಬಾಟಲ್ ಸ್ಥಿರತೆ ಹಾಗು ಬಳಕೆ ಕುರಿತು ಗೈಡ್ ಲೈನ್ಸ್​ ನೀಡಿತ್ತು. ಒಮ್ಮೆ ತೆರೆದ ಕೋವಾಕ್ಸಿನ್ ಬಾಟಲುಗಳನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದರೆ 28 ದಿನಗಳವರೆಗೆ ಬಳಸಬಹುದು ಅಂತಾ ತಿಳಿಸಿತ್ತು.

ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ
ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ

By

Published : Dec 28, 2021, 9:42 PM IST

ಬೆಂಗಳೂರು : ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಿಗೆ ನಿರ್ಬಂಧ ಹೇರಿದ್ದು, ಖಾಸಗಿ ಆಸ್ಪತ್ರೆಗಳು ಒಮ್ಮೆ ತೆರೆದ ಲಸಿಕಾ ಬಾಟಲ್​ಗಳನ್ನು ಮರುಬಳಕೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಒಮ್ಮೆ ಲಸಿಕಾ ಬಾಟಲ್ ತೆರೆದ ನಂತರ, ಬಾಟಲಿಯನ್ನು 4 ಗಂಟೆಗಳ ಒಳಗೆ ಬಳಸಬೇಕು. ಲಸಿಕೆ ಸೀಸೆ ಮಾನಿಟರ್ ಇಲ್ಲದಿದ್ದಲ್ಲಿ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ, ಕೋವಾಕ್ಸಿನ್ ಲಸಿಕೆಗೆ ಓಪನ್-ವೈಯಲ್ ನೀತಿಯನ್ನು ಅನುಮತಿಸಲಾಗುವುದಿಲ್ಲ ಎಂದು ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಗೆ ನಿರ್ಬಂಧ ಹೇರಲಾಗಿದೆ.

ಈ ಹಿಂದೆ ಕೋವಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್ ಓಪನ್ ಬಾಟಲ್ ಸ್ಥಿರತೆ ಹಾಗು ಬಳಕೆ ಕುರಿತು ಗೈಡ್ ಲೈನ್ಸ್​ ನೀಡಿತ್ತು. ಒಮ್ಮೆ ತೆರೆದ ಕೋವಾಕ್ಸಿನ್ ಬಾಟಲುಗಳನ್ನು 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದರೆ 28 ದಿನಗಳವರೆಗೆ ಬಳಸಬಹುದು ಅಂತಾ ತಿಳಿಸಿತ್ತು.

ತಕ್ಷಣ ಅಥವಾ ಪ್ರತಿರಕ್ಷಣೆ ಅವಧಿಯ ಕೊನೆಯಲ್ಲಿ ತಿರಸ್ಕರಿಸಬೇಕಾಗಿಲ್ಲ ಅಂತಾ ಭಾರತ್ ಬಯೋಟೆಕ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯು ಕೇಂದ್ರ ಆರೋಗ್ಯ ಇಲಾಖೆಗೆ ಸ್ಪಷ್ಟನೆ ಕೇಳಿತ್ತು. ಕೇಂದ್ರವೂ, ಲಸಿಕೆ ಸೀಸೆ ಮಾನಿಟರ್ ಇಲ್ಲದಿದ್ದಲ್ಲಿ ಗುಣಮಟ್ಟದ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ ಅಂತ ಸ್ಪಷ್ಟನೆ ನೀಡಿತ್ತು. ಹೀಗಾಗಿ ತೆರೆದ ಬಾಟಲಿ ನೀತಿ ಅನುಸರಿಸದಂತೆ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

For All Latest Updates

ABOUT THE AUTHOR

...view details