ನೆಲಮಂಗಲ: ಕೊರೊನಾ ವಾರಿಯರ್ ಗಳಾಗಿ ದುಡಿದ ವೈದ್ಯರು, ಪೊಲೀಸರು ಮತ್ತು ಆಶಾ ಕಾರ್ಯಕರ್ತರಿಗೆ ಸಂಘ ಸಂಸ್ಥೆಗಳಿಂದ ಸನ್ಮಾನ ಕಾರ್ಯಕ್ರಮ ಎಲ್ಲಾ ಕಡೆ ಮಾಡುತ್ತಿದ್ದಾರೆ, ಆದರೆ ಕೊರೊನೊ ವಾರಿಯರ್ಸ್ ಆಗಿ ದುಡಿದ ಇಲ್ಲಿನ ವೃತ್ತ ನಿರೀಕ್ಷಕರಿಗೆ ಸನ್ಮಾನ ಮಾಡುವ ಬದಲಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರದ ಉಪ ವಿಭಾಗದ ಮಾದನಾಯಕನಹಳ್ಳಿಯ ಲಕ್ಷ್ಮೀಪುರ ರಸ್ತೆಯಲ್ಲಿ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕೊರೊನಾ ವಾರಿಯರ್ಸ್ಗಳಾಗಿ ದುಡಿದ ವೈದ್ಯರು ಮತ್ತು ಆಶಾ ಕಾರ್ಯಕರ್ತರಿಗೆ ಸಂಘ ಸಂಸ್ಥೆಗಳು ಸನ್ಮಾನ ಮಾಡಲಾಯಿತು.
ಸನ್ಮಾನ ಮಾಡದೆ ಸರ್ಕಲ್ ಇನ್ಸ್ಪೆಕ್ಟರ್ಗೆ ಅವಮಾನ ಇದೇ ವೇಳೆ ಎಎಸ್ಪಿ ಸಜೀತ್, ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಸತ್ಯನಾರಾಯಣ್, ಸಂಚಾರಿ ಠಾಣೆಯ ವಿರೇಂದ್ರ, ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಸೇರಿದಂತೆ ಪೇದೆಗಳಿಗೂ ಸಹ ಸನ್ಮಾನ ಮಾಡಲಾಯಿತು.
ಆದರೆ ವೇದಿಕೆ ಮೇಲಿದ್ದ ನೆಲಮಂಗಲ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣನವರಿಗೆ ಸನ್ಮಾನಿಸದೆ ಅವಮಾನಿಸಿದ್ದಾರೆ. ಆಯೋಜಕರು ಇವರನ್ನು ವೇದಿಕೆಗೆ ಕರೆದಿದ್ದು, ವೇದಿಕೆಯ ಮೇಲಿದ್ದ ಪ್ರತಿಯೊಬ್ಬರಿಗೂ ಶಾಲು ಹೊದಿಸಿ ಸನ್ಮಾನಿಸಿದ ಶಾಸಕ ಎಸ್.ಆರ್.ವಿಶ್ವನಾಥ್ ಸರ್ಕಲ್ ಇನ್ಸ್‌ಪೆಕ್ಟರ್ ಶಿವಣ್ಣರವರಿಗೆ ಸನ್ಮಾನಿಸಿಲ್ಲ.
ಇನ್ನು ಕೆಲ ಕಾಲ ಸುಮ್ಮನೆ ನಿಂತು ಮುಜುಗರಪಟ್ಪು ಇನ್ಸ್‌ಪೆಕ್ಟರ್ ಶಿವಣ್ಣ ವೇದಿಕೆಯಿಂದ ವಾಪಸ್ ಬಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ನಗರದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.