ಬೆಂಗಳೂರು:ಪುನೀತ್ ಅಂತಿಮ ದರ್ಶನಕ್ಕೆ ಕಂಠೀರವ ಸ್ಟುಡಿಯೋಕ್ಕೆ ಅಭಿಮಾನಿಗಳ ಸಾಗರವೇ ಹರಿದುಬರುತ್ತಿದೆ. ಗಣ್ಯಾತಿಗಣ್ಯರು, ಇತರ ಚಿತ್ರರಂಗದ ಕಲಾವಿದರು ಕೂಡ ಅಪ್ಪುವಿನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಪೂಜಾ ಗಾಂಧಿ, ಮಿಲನ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೆ. ಅವರಂದರೆ ತುಂಬಾ ಗೌರವ. ಶಂಕರ್ ನಾಗ್, ಅಣ್ಣಾವ್ರನ್ನು ಕಳೆದುಕೊಂಡಷ್ಟೇ ನೋವಾಗಿದೆ. ಇದು ಕನ್ನಡ ಇಂಡಸ್ಟ್ರಿಗೆ ಬ್ಲಾಕ್ ಡೇ ಎಂದು ಕಣ್ಣೀರಿಟ್ಟರು.
ಸಾಹಿತಿ ಮನೋಹರ್, ನಟ ನಿರಂಜನ್ ಶೆಟ್ಟೆ, ಕೆಜಿಎಫ್ ವಿಲನ್ ಪಾತ್ರಧಾರಿ ಅವಿನಾಶ್, ಸಾಹಿತಿ ವಿ.ನಾಗೇಂದ್ರ ಪ್ರಸಾದ್, ರಾಜೇಶ್ ಕೃಷ್ಣನ್, ನಟ ಚೇತನ್, ಪೂಜಾಗಾಂಧಿ, ಟಿ.ಎನ್.ಸೀತಾರಾಮ್ ಸೇರಿ ಇಡೀ ಚಿತ್ರರಂಗದ ಬಳಗವೇ ವೀರ ಕನ್ನಡಿಗನ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಟಿ.ಎನ್. ಸೀತಾರಾಮ್
ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಮ್ ಮಾತನಾಡಿ, ಅಣ್ಣಾವ್ರನ್ನು ಕಳೆದುಕೊಂಡಿದ್ದಾಗ ಇದ್ದ ಭಾವವೇ ಈಗಲೂ ಇದೆ. ತಂದೆಯಂತೆಯೇ ಸರಳತೆ, ಸಜ್ಜನಿಕೆ, ಜ್ಞಾನ, ಪ್ರೀತಿ ಆತ್ಮೀಯತೆ ಅಪ್ಪುಗೂ ಇತ್ತು. ತುಂಬು ಜೀವನ ನಡೆಸುತ್ತಿದ್ದ
ಕಿರುತೆರೆ ನಿರ್ದೇಶಕರಾದ ಟಿಎನ್ ಸೀತಾರಾಮ್ ಮಾತನಾಡಿ, ಅಣ್ಣಾವ್ರನ್ನು ಕಳ್ಕೊಂಡಾಗ ಇದ್ದ ಭಾವವೇ ಈಗಲೂ ಇದೆ. ಅದೇ ಸರಳತೆ, ಸಜ್ಜನಿಕೆ, ಜ್ಞಾನ, ಪ್ರೀತಿ ಆತ್ಮೀಯತೆ ಇತ್ತು. ತುಂಬು ಜೀವನ ನಡೆಸುತ್ತಿದ್ದ ಅವರು 46 ಕ್ಕೆ ಹೋಗ್ತಿರೋದು ಬಹಳ ಆಶ್ಚರ್ಯವಾಗುತ್ತೆ. ಅವರು ತುಂಬಾ ಸರಳತೆಯಿಂದ ಇದ್ರು. ಭೂಮಿಗೆ ಅಂಟಿಕೊಂಡ ಮನುಷ್ಯರಾಗಿದ್ರು. ಯುವಜನ ಹೇಗೆ ಬದುಕಬೇಕು ಎಂಬುದನ್ನು ಸಿನಿಮಾದಲ್ಲಿ ತೋರಿಸಕೊಡುವ ಮೂಲಕ ಯೂತ್ ಐಕಾನ್ ಆಗಿದ್ರು. ಒಟಿಟಿಯಲ್ಲೂ ಒಳ್ಳೆಯ ಕಂಟೆಂಟ್ಗಳನ್ನು ತರುವ ಯೋಚನೆಯಲ್ಲಿದ್ದರು ಎಂದರು.