ಕರ್ನಾಟಕ

karnataka

ETV Bharat / state

ಪಿಎಸ್ಐ ನೇಮಕ ಅಕ್ರಮ: ಬಂಧಿತ ಅಮೃತ್ ಪಾಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ!

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ - ಅಮೃತ್ ಪಾಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ - ಶಂಭುಲಿಂಗ ಹಾಗೂ ಆನಂದ್ ಮನೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು - ಹಲವು ದಾಖಲೆ ಪತ್ರಗಳು ಜಪ್ತಿ, ಪರಿಶೀಲನೆ.

ಬಂಧಿತ ಅಮೃತ್ ಪಾಲ್ ಆಪ್ತರ ಮನೆಗಳ ಮೇಲೆ ಸಿಐಡಿ ದಾಳಿ
CID raids on the houses of friends of arrested Amrit Paul

By

Published : Aug 3, 2022, 12:04 PM IST

Updated : Aug 3, 2022, 12:29 PM IST

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪಾಲ್ ಆಪ್ತರ ಮನೆಗಳ ಸಿಐಡಿ ದಾಳಿ ನಡೆಸಿದೆ. ಜಕ್ಕೂರಿನ‌ ಶಂಭುಲಿಂಗ ಹಾಗೂ ಬೊಮ್ಮಸಂದ್ರದ ಹುಸ್ಕೂರ್ ನಿವಾಸಿ ಆನಂದ್ ಎಂಬುವವರ ಮನೆಗಳ ಮೇಲೆ ಸಿಐಡಿ ತನಿಖಾಧಿಕಾರಿಗಳು ದಾಳಿ ನಡೆಸಿದ್ದಾರೆ‌.

ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ದೊರೆತಿದ್ದು, ಅವುಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜಕ್ಕೂರಿನ ಶಂಭುಲಿಂಗ ಅವರು ರಾಯಚೂರು ಮೂಲದ ಎಎಸ್​ಐ ಅವರ ಮಗನಾಗಿದ್ದು, ಬೆಂಗಳೂರಿಗೆ ಬಂದು 10 ವರ್ಷಗಳಾಗಿದೆ. ಇವರು ಜಕ್ಕೂರಿನಲ್ಲಿ 6 ಕೋಟಿ ಮೌಲ್ಯದ ಫ್ಲ್ಯಾಟ್ ಹಾಗೂ 15 ಕೋಟಿಗೂ ಅಧಿಕ ಮೌಲ್ಯದ ಲ್ಯಾಂಡ್​​​​​ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ‌. ಕೊಡಿಗೆಹಳ್ಳಿಯಲ್ಲಿ ಕೃಷಿ ಉತ್ಪನ್ನಗಳ ಅಂಗಡಿ ಸಹ ಇಟ್ಟುಕೊಂಡಿದ್ದಾರೆ. ಎಡಿಜಿಪಿ ಅಮೃತ್ ಪಾಲ್ ಅವರ ಬೇನಾಮಿಯಾಗಿದ್ದ ಎಂಬ ಆರೋಪ ಕೇಳಿ ಬರುತ್ತಿದೆ.

ಇದನ್ನೂ ಓದಿ:ಭೀಮಾತೀರದ ಮಹಾದೇವ ಭೈರಗೊಂಡ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಇಬ್ಬರು ಶರಣಾಗತಿ

ಇನ್ನು ಹುಸ್ಕೂರು ಆನಂದ್ ಕೂಡ ಅಮೃತ್ ಪಾಲ್ ಜೊತೆ ಸೇರಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದಾರೆ ಎನ್ನುವ ಆರೋಪವಿದೆ. ಹುಸ್ಕೂರು, ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Last Updated : Aug 3, 2022, 12:29 PM IST

ABOUT THE AUTHOR

...view details