ಕರ್ನಾಟಕ

karnataka

ETV Bharat / state

ಅಸಲಿ ನೋಟಿನ ಮಧ್ಯೆ ನಕಲಿ ದುಡ್ಡು: ಕಾರಿನಲ್ಲಿ ಖೋಟಾ ನೋಟು ಸಾಗಿಸುತ್ತಿದ್ದ ಖದೀಮರು ಅಂದರ್ - ಎಲೆಕ್ಟ್ರಾನಿಕ್​ ಸಿಟಿ ಪೊಲೀಸರು

ಎಲೆಕ್ಟ್ರಾನಿಕ್ ‌ಸಿಟಿಯಲ್ಲಿ ಖೋಟಾನೋಟು ಸಾಗಿಸುತ್ತಿದ್ದ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

Electronic City Police Station
ಎಲೆಕ್ಟ್ರಾನಿಕ್​ ಸಿಟಿ ಪೊಲೀಸ್​ ಠಾಣೆ

By

Published : Mar 2, 2021, 12:22 PM IST

ಬೆಂಗಳೂರು:ಕಾರಿನಲ್ಲಿ ಖೋಟಾನೋಟು ಸಾಗಿಸುತ್ತಿದ್ದ ನಾಲ್ವರನ್ನು ಸಿಐಡಿ ಪೊಲೀಸರು ಬಂಧಿಸಿಎಲೆಕ್ಟ್ರಾನಿಕ್​ ಸಿಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವ, ನಾಗೇಂದ್ರ, ಪ್ರಕಾಶ್, ಲಕ್ಷ್ಮಣ ಬಂಧಿತ ಆರೋಪಿಗಳಾಗಿದ್ದು ಮೂಲತಃ ಇವರು ಚಾಮರಾಜನಗರ ಜಿಲ್ಲೆಯ ಸಿಂಗನೆಲ್ಲೂರು ಗ್ರಾಮದ ನಿವಾಸಿಗಳಾಗಿದ್ದಾರೆ. ದೊಡ್ಡತೋಗುರು ಗ್ರಾಮದ ರಸ್ತೆಯಲ್ಲಿ ಕಾರಿನಲ್ಲಿ 6.80 ಲಕ್ಷ ಮೌಲ್ಯದ 2 ಸಾವಿರ ಮುಖಬೆಲೆಯ 340 ನಕಲಿ ನೋಟುಗಳ ಸಾಗಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ನೋಟಿನ ಕಟ್ಟಿನ ಮೇಲ್ಭಾಗದಲ್ಲಿ ಮತ್ತು ಕಟ್ಟಿನ ಕೆಳಭಾಗದಲ್ಲಷ್ಟೇ ಅಸಲಿ ನೋಟು ಕಾಣುವಂತಿದ್ದು, ಇದರ ನಡುವೆ ನೋಟಿನ ಆಕಾರದ ಬಿಳಿ ಹಾಳೆಗಳಿದ್ದವು ಎನ್ನಲಾಗ್ತಿದೆ. ಖಚಿತ ಮಾಹಿತಿ ಮೇರೆಗೆ ಕಾರು ಪರಿಶೀಲನೆ ನಡೆಸಿ ಜಪ್ತಿ ಮಾಡಿದಾಗ ಆರೋಪಿಗಳು ನಕಲಿ ನೋಟಿನ ಕಂತೆಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್​ಐಆರ್ ದಾಖಲಿಸಿ ಖೋಟಾ-ನೋಟಿನ ಜಾಲ ಪತ್ತೆ ಹಚ್ಚಲು ಸಿಐಡಿ ಪೊಲೀಸರು ಮುಂದಾಗಿದ್ದಾರೆ.

ABOUT THE AUTHOR

...view details