ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪಿಎಸ್ಐ ನವೀನ್ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದಿಗಳನ್ನು ಸಿಐಡಿ ಬಂಧಿಸಲು ಮುಂದಾಗಿದೆ.
ಸಿಐಡಿ ತಂಡ ಎಲ್ಲ ಕಡೆ ಹುಡುಕಾಟ ನಡೆಸುತ್ತಿದೆ. ಈ ನಡುವೆ ನವೀನ್ ಮೊಬೈಲ್ ಬಳಸುತ್ತಿಲ್ಲ. ಸಂಬಂಧಿಗಳ ಮೇಲೂ ಕಣ್ಣಿಡಲಾಗಿದೆ. ಸಂಬಂಧಿಕರ ಚಲನವಲನ ಗಮನಿಸಲಾಗುತ್ತಿದೆ. ಪಿಎಸ್ಐ ನವೀನ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದರು. ಇಲಾಖೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಅವರು ಬಳಿಕ ಅಕ್ರಮವಾಗಿ ಪಿಎಸ್ಐ ಆಗಿ ಆಯ್ಕೆ ಆಗಿದ್ದರು. 545 ಪಿಎಸ್ಐ ಅಕ್ರಮ ಪ್ರಕರಣ ಹೊರಬಂದ ಬಳಿಕ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.