ಕರ್ನಾಟಕ

karnataka

ETV Bharat / state

ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ: ಸಾಮಾಜಿಕ ಅಂತರ ಕಾಯ್ದುಕೊಂಡೇ ಚರ್ಚ್‌ನಲ್ಲಿ ಪ್ರಾರ್ಥನೆ - Covid rules

ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕ್ರೈಸ್ತ ಬಾಂಧವರು ಸರಳ ಕ್ರಿಸ್​ಮಸ್​ ಆಚರಣೆ ಮೊರೆ ಹೋಗಿದ್ದಾರೆ. ಸಿಲಿಕಾನ್​ ಸಿಟಿಯ ಚರ್ಚ್‌ಗಳಲ್ಲಿ ಕೋವಿಡ್​ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಲಾಯಿತು.

Christmas Celebration: Praying in the Church while Maintaining Social Gap
ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ: ಸಾಮಾಜಿಕ ಅಂತರ ಕಾಯ್ದುಕೊಂಡೆ ಚರ್ಚ್‌ನಲ್ಲಿ ಪ್ರಾರ್ಥನೆ

By

Published : Dec 25, 2020, 3:39 PM IST

ಬೆಂಗಳೂರು: ನಾಡಿನಲ್ಲೆಡೆ ಇಂದು ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದ್ದು, ನಗರದಾದ್ಯಂತ ಕ್ರೈಸ್ತ ಬಾಂಧವರು ಕೊರೊನಾ ಹಿನ್ನೆಲೆ ಹಬ್ಬ ಸರಳವಾದರೂ ಸಂಭ್ರಮದಿಂದ ಆಚರಿಸಿದ್ದು ಕಂಡುಬಂತು.

ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ: ಸಾಮಾಜಿಕ ಅಂತರ ಕಾಯ್ದುಕೊಂಡೆ ಚರ್ಚ್‌ನಲ್ಲಿ ಪ್ರಾರ್ಥನೆ

ಪ್ರತಿವರ್ಷ ಕ್ರಿಸ್ಮಸ್ ಹಬ್ಬದಂದು ಪ್ರಾರ್ಥನೆ ಮುಗಿದ ನಂತರ ಮಧ್ಯರಾತ್ರಿ ಪಟಾಕಿಗಳನ್ನು ಸಿಡಿಸಿ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕ್ರೈಸ್ತ ಬಾಂಧವರು ಸರಳ ಆಚರಣೆಯ ಮೊರೆ ಹೋಗಿದ್ದಾರೆ. ಇನ್ನು ಚರ್ಚ್‌ಗಳಲ್ಲಿ ಪ್ರತಿ ಬಾರಿಯ ಪ್ರಾರ್ಥನೆಗೆ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹಾಗೂ ಅಲ್ಲಿ ಕೋವಿಡ್​ ನಿಯಮಗಳ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಲಾಯಿತು.

ಇನ್ನು ಪ್ರತಿ ಚರ್ಚ್​ನಲ್ಲಿದ್ದ ಸ್ವಯಂ ಸೇವಕರು ಚರ್ಚ್‌ಗೆ ಬರುವ ಪ್ರತಿಯೊಬ್ಬರನ್ನೂ ಪರೀಕ್ಷಿಸಿ, ಸ್ಯಾನಿಟೈಸರ್ ಬಳಸುವಂತೆ ಸೂಚಿಸಿ ಮತ್ತು ಮಾಸ್ಕ ಧರಿಸಿ ಬಂದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡುತ್ತಿದ್ದರು.

ABOUT THE AUTHOR

...view details