ಕರ್ನಾಟಕ

karnataka

ETV Bharat / state

ಅದ್ಧೂರಿಯಾಗಿ ಜರುಗಿದ ಚೌಡೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ - Chowdeshwari Rathostava

ಸೋಮೇಶ್ವರ ದೇವರಿಗಳಿಗೆ, ದೀಪಾರಾಧನೆ, ಲಿಲಿತಾ ಸಹಸ್ರನಾಮ ಕುಂಕುಮಾರ್ಚನೆ, ಉಯ್ಯಾಲೆಸೇವೆ, ಸಪ್ತಪತಿ ನಾರಾಯಣ ನವಕ ಕಲಶಾಭಿಷೇಕ,ಸುವರ್ಣ ಆಭರಣ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು.

ಚೌಡೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ

By

Published : Apr 28, 2019, 6:07 AM IST

ಬೆಂಗಳೂರು: ಮಹದೇವಪುರದ ಮಾರತ್ತಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ಬ್ರಹ್ಮರಥೋತ್ಸವ ಅಂಗವಾಗಿ ಶ್ರೀ ಚೌಡೇಶ್ವರಿಗೆ ವಿವಿಧ ಹೂಗಳಿಂದ ಅಲಂಕಾರ, ಮತ್ತು ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಮಹಾಮಂಗಳ ರಾತ್ರಿ ತೀರ್ಥಪ್ರಸಾದ ವಿನಿಯೋಗ, ಬೆಲ್ಲಧಾರತಿ, ಶ್ರೀಗಣಪತಿ, ಶ್ರೀಆಂಜನೇಯಸ್ವಾಮಿ,ಸೋಮೇಶ್ವರ ದೇವರಿಗಳಿಗೆ, ದೀಪಾರಾಧನೆ, ಲಿಲಿತಾ ಸಹಸ್ರನಾಮ ಕುಂಕುಮಾರ್ಚನೆ, ಉಯ್ಯಾಲೆಸೇವೆ, ಸಪ್ತಪತಿ ನಾರಾಯಣ ನವಕ ಕಲಶಾಭಿಷೇಕ,ಸುವರ್ಣ ಆಭರಣ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು.

ಚೌಡೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ

ಡೊಳ್ಳು ಕುಣಿತ, ಟಮಟೆ ವಾದ್ಯ ಕೀಳು ಕುದುರೆ, ಗೊಂಬೆ ಕುಣಿತ ವಿವಿಧ ಜನಪದ ಕಲಾತಂಡಗಳ ಪದರ್ಶನ ನೆರದಿದ್ದ ಭಕ್ತರ ಗಮನ ಸೆಳೆಯಿತು. ಬೆಂಗಳೂರು ನಗರದ ಮಾರತ್ತಹಳ್ಳಿಯಲ್ಲಿರುವ ಇತಿಹಾಸ ಪ್ರಸಿದ್ಧ ಚೌಡೇಶ್ವರಿ ದೇವಸ್ಥಾನ ಹಲವು ವೈಶಿಷ್ಟ್ಯ ಹೊಂದಿದೆ. ಸತತ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಮಾರತ್ತಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಅಮ್ಮನ ರಥೋತ್ಸವದಲ್ಲಿ ಪಾಲ್ಗೊಳುತ್ತಾರೆ.

For All Latest Updates

ABOUT THE AUTHOR

...view details