ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಚಿತ್ರ ಸಂತೆಗೆ ಕೌಂಟ್ ಡೌನ್ ಶುರುವಾಗಿದೆ. ಸಾವಿರಾರು ಚಿತ್ರಗಳ ಲೋಕವೇ ನಾಳೆ ಅನಾವರಣಗೊಳ್ಳಲಿದೆ. 75ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಚಿತ್ರಸಂತೆಯನ್ನು ಸ್ವಾತಂತ್ರ್ಯ ಯೋಧರಿಗೆ ಈ ಸಲ ಸಮರ್ಪಿಸಲಾಗಿದೆ. ಚಿತ್ರಸಂತೆಯ ಮತ್ತೊಂದು ವಿಶೇಷತೆ ಎಂದರೆ ವಾರ್ಷಿಕ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡುವುದು.
ಇಂದು ಚಿತ್ರಕಲಾ ಪರಿಷತ್ನಲ್ಲಿ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಯನ್ನ ಸಚಿವ ಎಸ್ ಟಿ ಸೋಮಶೇಖರ್ ಪ್ರದಾನ ಮಾಡಿದರು. ನಾಲ್ವರು ಹಿರಿಯ ಕಲಾವಿದರನ್ನು ಗುರುತಿಸಿ ವಿವಿಧ ವರ್ಗದ ಕಲಾವಿದರಿಗೆ ವಿತರಿಸಲಾಯಿತು. ಹೆಚ್.ಕೆ.ಕೇಜಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ಡಿ.ದೇವರಾಜ ಅರಸು ಪ್ರಶಸ್ತಿ, ಮತ್ತು ವೈಸುಬ್ರಮಣ್ಯರಾಜು ಪ್ರಶಸ್ತಿಗಳಿಗೆ ರೂ. 50,000/- ನಗದು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ಎಸ್.ನಂಜುಂಡರಾವ್ ಇವರ ಹೆಸರಿನಲ್ಲಿ ರಾಷ್ಟ್ರ ಮಟ್ಟದ ಹಿರಿಯ ಕಲಾವಿದರಿಗೆ 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಮತ್ತು ಫಲಕವನ್ನು ನೀಡಿ ಗೌರವಿಸಲಾಗುತ್ತಿದೆ.
ಪ್ರಶಸ್ತಿ- ಪುರಸ್ಕೃತ ಕಲಾವಿದರು :
1) ಪ್ರೊ.ಎಂ.ಎಸ್.ನಂಜುಂಡರಾವ್ ಪ್ರಶಸ್ತಿ- ಪ್ರೊ. ರಥನ್ ಪರಿಮು