ಬೆಂಗಳೂರು :ಚೀಟಿ ಹೆಸರಿನಲ್ಲಿ ನೂರಾರು ಜನ ಅಮಾಯಕರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಘಟನೆ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರದಲ್ಲಿ ನಡೆದಿದೆ.
ಕಳೆದ ಆರು ತಿಂಗಳ ಹಿಂದೆ ಚೀಟಿ ಮುಗಿದಿದೆ. ಆದರೂ ಸಹ ಮತ್ತೆ ಬಡ್ಡಿ ಕೊಡುವುದಾಗಿ ಜನರನ್ನು ನಂಬಿಸಿದ್ದರು. ಬಳಿಕ ಕಳೆದ ಆರು ತಿಂಗಳಿಂದ ಹಣ ನೀಡದೆ ಇಬ್ಬರು ಪರಾರಿಯಾಗಿದ್ದರು. ಅಷ್ಟೇ ಅಲ್ಲ, ಹಣ ಹಾಕಿದವರು ನೀಲಾವತಿಯವರ ಸ್ವಂತ ಮನೆ ಇದೆ ಎನ್ನುವ ಕಾರಣಕ್ಕೆ ತಾಳ್ಮೆಯಿಂದ ಇದ್ದರು.
ಇದರ ನಡುವೆ ಚೀಟಿ ಹಾಕಿದ್ದ ಜನರಿಗೆ ಈಗ ಹೊಸಕೆರೆಹಳ್ಳಿಯಲ್ಲಿದ್ದ ಮನೆಯನ್ನು ಮಾರಾಟ ಮಾಡಿರುವ ವಿಚಾರ ತಿಳಿದು ನೀಲಾವತಿಯನ್ನು ಹುಡುಕಿ ಗಿರಿನಗರ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಠಾಣೆ ಎದುರು ನಿಂತು ಜನ ನಮ್ಮ ಹಣ ವಾಪಸ್ ಕೊಡಿಸುವಂತೆ ಪಟ್ಟು ಹಿಡಿದಿದ್ದಾರೆ.