ಕರ್ನಾಟಕ

karnataka

ETV Bharat / state

ಬಾರದ ಲೋಕಕ್ಕೆ ಪಯಣ ಬೆಳೆಸಿದ ಸ್ಯಾಂಡಲ್​ವುಡ್​ ವಾಯುಪುತ್ರ... - ಚಿರಂಜೀವಿ ವಿಧಿವಶ

ಚಿರು ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಬೆಂಗಳೂರಿನ ಸಾಗರ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

Chiranjeevi Sarja has died of a heart attack
ಬಾರದ ಲೋಕಕ್ಕೆ ಪಯಣ ಬೆಳೆಸಿದ ವಾಯುಪುತ್ರ : ಚಿರಂಜೀವಿ ಸರ್ಜಾ ವಿಧಿವಶ

By

Published : Jun 7, 2020, 5:22 PM IST

Updated : Jun 7, 2020, 6:15 PM IST

ಸ್ಯಾಂಡಲ್​ವುಡ್​​ನ​ ಚಿರಂಜೀವಿ ಸರ್ಜಾ ಲಘು ಹೃದಯಘಾತದಿಂದಾಗಿ ಸಾಗರ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 17 ಅಕ್ಟೋಬರ್ 1984ರಂದು ಜನಿಸಿದ್ದ ಇವರು, ವಾಯುಪುತ್ರ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ರು.

ಬಾಲ್ಯದಲ್ಲಿ ಚಿರು

ಸುಮಾರು 22 ಸಿನಿಮಾಗಳಲ್ಲಿ ನಟಿಸಿರುವ ಇವರಿಗೆ ನಟಿ ಮೇಘನಾ ರಾಜ್ ಮಡದಿಯಾಗಿದ್ದಾರೆ. ಅಲ್ಲದೆ ಬಹುಭಾಷಾ ನಟರಾದ ಅರ್ಜುನ್​​​ ಸರ್ಜಾರ ಸೋದರಳಿಯ ಇವರು. ಚಿರುಗೆ ನಟ ಧ್ರುವ ಸರ್ಜಾ ಸಹೋದರ. ಇನ್ನೊಂದು ವಿಶೇಷ ಅಂದ್ರೆ ಕನ್ನಡದ ಹಿರಿಯ ನಟ, ಶಕ್ತಿ ಪ್ರಸಾದ್ ಅವರಿಗೆ ಚಿರಂಜೀವಿ ಮೊಮ್ಮಗ.

ಸೋದರಮಾವ ಅರ್ಜುನ್​ ಸರ್ಜಾ ಜೊತೆಗೆ
ರಜನೀಕಾಂತ್​ ಜೊತೆಗೆ

ಚಿರು, ಗಂಡೆದೆ, ವರದನಾಯಕ, ವಾಯುಪುತ್ರ, ಚಂದ್ರಲೇಖ, ರುದ್ರತಾಂಟ, ರಾಮಲೀಲಾ, ಸೀಜರ್​, ಸಿಂಗಾ, ಅಮ್ಮಾ ಐ ಲವ್​ ಯು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಪತ್ನಿ ಮೇಘನಾ ರಾಜ್​ ಜೊತೆಗೆ ಚಿರು
ಧ್ರುವ ಸರ್ಜಾ ಜೊತೆಗೆ ಚಿರು

ವರದ ನಾಯಕ ಸಿನಿಮಾದಲ್ಲಿ ಸುದೀಪ್​ ಜೊತೆ ಸಹೋದರನಾಗಿ ಕಾಣಿಸಿಕೊಂಡಿದ್ದು, ಚಿತ್ರ ಬಿಗ್​ ಹಿಟ್​​ ನೀಡಿತ್ತು. ಅಲ್ಲದೆ ಇವರ ಹೆಸರಿನ ಮೇಲೆ ನಿರ್ಮಾಣವಾಗಿದ್ದ ಚಿರು ಚಿತ್ರ ಕೂಡ ದೊಡ್ಡ ಯಶಸ್ಸು ಕಂಡಿತ್ತು. ಚಿರಂಜೀವ ಅಭಿನಯಿಸಿದ ಕೊನೆಯ ಸಿನಿಮಾ ಶಿವಾರ್ಜುನ.

2017ರಲ್ಲಿ ಮೇಘನಾ ರಾಜ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡದ್ದ ಚಿರಂಜೀವಿ ಸರ್ಜಾ, 2018ರಲ್ಲಿ ಸಪ್ತಪದಿ ತುಳಿದಿದ್ದರು. ಚಿಕ್ಕ ವಯಸ್ಸಿನಲ್ಲೇ ಚಿರು ಚಿರನಿದ್ರೆಗೆ ಜಾರಿರುವುದು ಸ್ಯಾಂಡಲ್​ವುಡ್​ಗೆ ತುಂಬಲಾರದ ನಷ್ಟವಾಗಿದೆ.

ಚಲನ ಚಿತ್ರ ದಿಗ್ಗಜರೊಂದಿಗೆ
Last Updated : Jun 7, 2020, 6:15 PM IST

ABOUT THE AUTHOR

...view details