ಬೆಂಗಳೂರು:ಈ ಹಿಂದೆಸಾರ್ವಜನಿಕರಿಗೆ ಚೀನಾ ಮೂಲದ ಲೋನ್ ಆ್ಯಪ್ ಮೂಲಕ ಕಿರುಕುಳ ನೀಡುತ್ತಿದ್ದವರ ವಿರುದ್ಧ ತನಿಖೆ ನಡೆಸಲು ಸಿಸಿಬಿ ಮುಂದಾಗಿತ್ತು. ಆದರೆ ಇದೀಗ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಕೇಸ್ ಸಿಐಡಿಗೆ ವರ್ಗಾವಣೆಯಾಗಿದೆ.
ಪ್ರಕರಣ ಸಿಐಡಿಗೆ ವರ್ಗಾವಣೆಯಾದ ಬೆನ್ನಲ್ಲೇ ಮೂವರ ಹೆಡೆಮುರಿ ಕಟ್ಟಲಾಗಿದೆ.
ಇದನ್ನು ಓದಿ: ಕೇಂದ್ರ ಸಚಿವ ಸದಾನಂದಗೌಡ ಅಸ್ವಸ್ಥ: ಝೀರೋ ಟ್ರಾಫಿಕ್ ಮೂಲಕ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಶಿಫ್ಟ್
ಚೀನಾ ಆ್ಯಪ್ಗಳನ್ನು ಬಳಕೆ ಮಾಡುವಂತೆ ಜನರಿಗೆ ಪ್ರೇರೇಪಿಸಿ, ಅವರು ಸಾಲ ಪಡೆದುಕೊಂಡ ಬಳಿಕ ಸಾಲಕ್ಕಿಂತ ಹೆಚ್ಚಿನ ಹಣ ಮರುಪಾವತಿ ಮಾಡುವಂತೆ ಕಿರುಕುಳ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದರು. ಇದೀಗ ಮತ್ತೆ ಮೂವರನ್ನು ಸಿಐಡಿ ವಶಕ್ಕೆ ಪಡೆದುಕೊಂಡಿದೆ.
15 ಸಾವಿರ ಜನರಿಗೆ ಸಾಲ ನೀಡಿದ್ದು, 15 ಕೋಟಿಯಷ್ಟು ಸಾಲ ಹಾಗೂ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಆ್ಯಪ್ಗೆ ವ್ಯಾವಹಾರಿಕ ಅನುಮತಿ ಸಹ ಇರಲಿಲ್ಲವೆಂಬ ವಿಚಾರ ಹೊರಬಿದ್ದಿದೆ. ಅಷ್ಟೇ ಅಲ್ಲದೆ, ಚೀನಾ ಮೂಲದ ಇಬ್ಬರು ಖದೀಮರು ಈ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.