ಕರ್ನಾಟಕ

karnataka

ETV Bharat / state

ಚಿಲುಮೆ‌‌ ಕೇಸ್‌.. ನಾಲ್ಕನೇ ಆರೋಪಿ ಅರೆಸ್ಟ್ - ಈಟಿವಿ ಭಾರತ್ ಕನ್ನಡ ಸುದ್ದಿ

ಮತದಾರರ ವೈಯಕ್ತಿಕ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಲಸೂರು  ಗೇಟ್​ ಪೊಲೀಸ್​ ಠಾಣೆ
ಹಲಸೂರು ಗೇಟ್​ ಪೊಲೀಸ್​ ಠಾಣೆ

By

Published : Nov 22, 2022, 6:56 PM IST

Updated : Nov 22, 2022, 7:17 PM IST

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ನಾಲ್ಕನೇ ಆರೋಪಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರು ಮಾತನಾಡಿದರು

ಲೋಕೇಶ್​ ಬಂಧಿತ ಆರೋಪಿ. ಪ್ರಕರಣದ ಪ್ರಮುಖ‌ ಆರೋಪಿ ರವಿಕುಮಾರ್ ಆಪ್ತನಾಗಿದ್ದು, ಮತದಾರರ ವೈಯಕ್ತಿಕ ಮಾಹಿತಿ‌ ಸಂಗ್ರಹ ಹಾಗೂ ದುರ್ಬಳಕೆ ಕೃತ್ಯಗಳಲ್ಲಿ ಭಾಗಿಯಾಗಿದ್ದ.

ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾತನಾಡಿ, ಪ್ರಕರಣ ಸಂಬಂಧ ಮತ್ತೊಬ್ಬನನ್ನು ಬಂಧಿಸಲಾಗಿದೆ. ಈಗಾಗಲೇ ಕಾಡುಗೋಡಿ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದವು. ಆತನನ್ನ ಬಂಧಿಸಿ ಒಂದು‌ ಸುತ್ತು ವಿಚಾರಣೆ ಮಾಡಲಾಗಿದೆ. ಹೆಚ್ಚಿನ‌‌ ವಿಚಾರಣೆ ಮಾಡಲಾಗ್ತಿದೆ. ಈತ ಕೇಸ್ ನ ಮುಖ್ಯ ಆರೋಪಿ ರವಿಕುಮಾರ್ ಆಪ್ತನಾಗಿದ್ದ. ಸದ್ಯ ಹೆಚ್ಚಿನ ತನಿಖೆ ಮುಂದುವರೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಓದಿ:ಚಿಲುಮೆ ಸಂಸ್ಥೆಯ ಮೂವರು ಆರೋಪಿಗಳು 12 ದಿನ ಪೊಲೀಸ್ ವಶಕ್ಕೆ

Last Updated : Nov 22, 2022, 7:17 PM IST

ABOUT THE AUTHOR

...view details