ಕರ್ನಾಟಕ

karnataka

ETV Bharat / state

ಕೆಲಸಕ್ಕೆ ಬೇಡವಾದವರ ಜಗಳ-ಪ್ರಚಾರ ಬೇಡ : ವ್ಯಸನಗಳ ವಿರುದ್ಧ ಮಕ್ಕಳಿಗೆ ಶಿಕ್ಷಣ ಅಗತ್ಯ - Awareness against drug addictions

ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಮಾದಕ ವ್ಯಸನಗಳ ಕುರಿತಾದ ಯಾವುದೇ ಪಾಠವಿಲ್ಲದೆ ಇರುವುದು ವಿಷಾದಕರ. ಕಾಟಾಚಾರಕ್ಕೆ ಹೋಮ್​​ ವರ್ಕ್ ಹೆಸರಿನಲ್ಲಿ ಗಾಂಜಾ ಎಂದರೆ ಏನು ಎಂದು ಪ್ರಶ್ನೆಗೆ ಉತ್ತರ ನೀಡಬೇಕಿದೆ. ಇದರಿಂದ ಮಕ್ಕಳಿಗೆ ಯಾವುದೇ ಜಾಗೃತಿ ಮೂಡುವುದಿಲ್ಲ. ಮಾದಕ ವ್ಯಸನಗಳ ವಿರುದ್ಧ ಜಾಗೃತಿ ನೀತಿ ಪಾಠ ಇದ್ದಂತೆ ನೀತಿ ಮುಖ್ಯವೇ ಹೊರತು ಪಾಠವಲ್ಲ ಎಂದು ಹಿರಿಯ ವಕೀಲ ಶ್ಯಾಮ್ ​ಸುಂದರ್ ಹೇಳಿದ್ದಾರೆ.

ಹಿರಿಯ ವಕೀಲ ಶ್ಯಾಮ್​ಸುಂದರ್
ಹಿರಿಯ ವಕೀಲ ಶ್ಯಾಮ್​ಸುಂದರ್

By

Published : Sep 17, 2020, 10:43 PM IST

Updated : Sep 18, 2020, 1:17 PM IST

ಬೆಂಗಳೂರು: ದೇಶದಲ್ಲಿ ಚರ್ಚೆಯಲ್ಲಿರುವ ಡ್ರಗ್ಸ್​​ ಪ್ರಕರಣಗಳಲ್ಲಿ ಕೆಲಸಕ್ಕೆ ಬೇಡವಾದವರು ಜಗಳವಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಆದರೆ ಮಾದಕ ವ್ಯಸನಗಳ ವಿರುದ್ಧ ಮಕ್ಕಳಿಗೆ ಶಿಕ್ಷಣದ ಅಗತ್ಯವಿದೆ ಎಂದು ಹಿರಿಯ ವಕೀಲ ಶ್ಯಾಮ್ ​ಸುಂದರ್ ಹೇಳಿದ್ದಾರೆ.

ಈ ಪ್ರಕರಣದ ಸಮಸ್ಯೆ ಬಗ್ಗೆ ನಾವು ಗಮನಹರಿಸುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಪ್ರಾಧ್ಯಾಪಕರು ಕೇವಲ ಪಠ್ಯ ಪುಸ್ತಕಗಳಲ್ಲಿರುವ ಪಾಠವನ್ನು ಬೋಧನೆಗೆ ಮಾತ್ರ ಸೀಮಿತವಾಗಿಸಿದ್ದಾರೆ. ಗುರು ಶಿಷ್ಯರ ಸಂಬಂಧದ ಮಹತ್ವ ಇತ್ತೀಚೆಗೆ ಕ್ಷೀಣಿಸುತ್ತಿದೆ. ಕೆಲ ದಶಕಗಳ ಹಿಂದೆ ಈ ರೀತಿ ಇರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶೈಕ್ಷಣಿಕ ಪಠ್ಯಕ್ರಮಗಳಲ್ಲಿ ಮಾದಕ ವ್ಯಸನಗಳ ಕುರಿತಾದ ಯಾವುದೇ ಪಾಠವಿಲ್ಲದೆ ಇರುವುದು ವಿಷಾದಕರ. ಕಾಟಾಚಾರಕ್ಕೆ ಹೋಮ್​​ ವರ್ಕ್ ಹೆಸರಿನಲ್ಲಿ ಗಾಂಜಾ ಎಂದರೆ ಏನು ಎಂದು ಪ್ರಶ್ನೆಗೆ ಉತ್ತರ ನೀಡಬೇಕಿದೆ. ಇದರಿಂದ ಮಕ್ಕಳಿಗೆ ಯಾವುದೇ ಜಾಗೃತಿ ಮೂಡುವುದಿಲ್ಲ. ಮಾದಕ ವ್ಯಸನಗಳ ವಿರುದ್ಧ ಜಾಗೃತಿ ನೀತಿಪಾಠ ಇದ್ದಂತೆ ನೀತಿ ಮುಖ್ಯವೇ ಹೊರತು ಪಾಠವಲ್ಲ.

ಶಿಕ್ಷಣ ಇಲಾಖೆ ಪಾತ್ರ ವಹಿಸಬೇಕು:

ಮಕ್ಕಳಲ್ಲಿ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ದೊಡ್ಡ ಜವಾಬ್ದಾರಿಯನ್ನು ಹೊರಬೇಕಿದೆ. ಪ್ರಪ್ರಥಮವಾಗಿ ಪ್ರಾಧ್ಯಾಪಕರಿಗೆ ಮಾದಕ ವ್ಯಸನಗಳ ವಿರುದ್ಧ ಆಗುವ ದುಷ್ಪರಿಣಾಮಗಳ ಕುರಿತು ತರಬೇತಿ ನೀಡಬೇಕು. ನಂತರ ಪಠ್ಯಕ್ರಮದಲ್ಲಿ ಇದರ ಕುರಿತಾದ ಜಾಗೃತಿ ಪಾಠಗಳನ್ನು ಅಳವಡಿಸಬೇಕು. ಯವ್ವನದಲ್ಲಿ ವ್ಯಸನಿಗಳು, ಆದರೆ ಮಧ್ಯವಯಸ್ಕರು ಆಗುವಷ್ಟರಲ್ಲಿ ನೀವು ಅಪ್ರಯೋಜಕ ಆಗುತ್ತೀರಿ ಎಂಬ ಜಾಗೃತಿ ಮಕ್ಕಳಿಗೆ ಬರಬೇಕು.

ಹಿರಿಯ ವಕೀಲ ಶ್ಯಾಮ್​ಸುಂದರ್

ಅಮೆರಿಕ ರಾಷ್ಟ್ರದಲ್ಲಿ ಲೈಂಗಿಕ ಶಿಕ್ಷಣ ಮಾದಕ ವ್ಯಸನಗಳ ವಿರುದ್ಧ ಶಿಕ್ಷಣ ಹಾಗೂ ಆಯುಧಗಳ ದುರುಪಯೋಗ ಕುರಿತು ಶಿಕ್ಷಣ ಮಕ್ಕಳಿಗೆ ಬೋಧಿಸಲಾಗುತ್ತದೆ.

ಜಾಗೃತಿ ಹೆಸರಿನಲ್ಲಿ ಕುತೂಹಲ ಬೆಳದು ಮಕ್ಕಳು ವ್ಯಸನಿಗಳಾದರೆ?

ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಪಾಠಗಳನ್ನು ಬೋಧಿಸಿದರೆ ಕುತೂಹಲ ಹೆಚ್ಚಾಗಿ ಮಕ್ಕಳು ವ್ಯಸನಿಗಳಾಗುತ್ತಾರೆ ಎನ್ನುವುದು ಸಂಶಯದ ಪರಮಾವಧಿ. ಇದು ಅಡುಗೆ ಮನೆಯಲ್ಲಿರುವ ಚಾಕುವನ್ನು ಕೊಲೆ ಮಾಡುವುದಕ್ಕೆ ಇರುವ ಆಯುಧ ಎಂದು ನೋಡಿದಷ್ಟೇ ಮೂರ್ಖತನ.

ಪೋಷಕರ ಅಭಿಪ್ರಾಯ ಕೇಳಿ ಜಾಗೃತಿ ಪಾಠ ರಚಿಸಿ:

ಆಯ್ದ ತಜ್ಞರು ಕೋಣೆಯಲ್ಲಿ ಕುಳಿತು ನಿಮ್ಮ ಸಂಶಯ ಹಾಗೂ ಬಾಲಿಶ ಬುದ್ಧಿಮತ್ತೆಯಿಂದ ಇದನ್ನು ನಾಶ ಮಾಡಬೇಡಿ. ಸಮಾಜ ಹಾಗೂ ಪೋಷಕರ ಅಭಿಪ್ರಾಯಗಳನ್ನು ಪರಿಗಣಿಸಿ ನಂತರ ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳಿ.

ಒಟ್ಟಾರೆಯಾಗಿ ಮಕ್ಕಳಿಗೆ ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸಲಿದ್ದಾರೆ. ಜವಾಬ್ದಾರಿ ನಾಗರಿಕನಾಗಿ ಹಾಗೂ ಮಾಜಿ ಶಿಕ್ಷಕನಾಗಿ ಪಠ್ಯಕ್ರಮದಲ್ಲಿ ಮಾದಕ ವ್ಯಸನಗಳ ವಿರುದ್ಧ ಜಾಗೃತಿಯ ಪಾಠಗಳಿಂದ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Sep 18, 2020, 1:17 PM IST

ABOUT THE AUTHOR

...view details