ಕರ್ನಾಟಕ

karnataka

ETV Bharat / state

ಗಲಭೆ ಪ್ರಕರಣ: ಡಿ.ಜೆ. ಹಳ್ಳಿ ಠಾಣೆ ಮುಂದೆ ಬಂಧಿತರ ಮಕ್ಕಳ ಕಣ್ಣೀರು - KG Halli violence

ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಮಕ್ಕಳು ತಮ್ಮ ಅಪ್ಪಂದಿರನ್ನು ಬಿಡುಗಡೆ ಮಾಡುವಂತೆ ಠಾಣೆಯ ಮುಂದೆ ಬಂದು ಅಳಲನ್ನು ತೋಡಿಕೊಂಡಿದ್ದಾರೆ.

childrens-requested-police-to-release-their-fathers-who-are-arrested-for-bangalore-violence
ಬೆಂಗಳೂರು ಗಲಭೆ ಪ್ರಕರಣ

By

Published : Aug 24, 2020, 5:12 PM IST

ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧಿತರ ಕುಟುಂಬಸ್ಥರ ಮಕ್ಕಳು ಠಾಣೆ ಬಳಿ ಬಂದು ತಮ್ಮ ಅಪ್ಪಂದಿರನ್ನು ಬಿಡಿ ಎಂದು ಕಣ್ಣೀರು ಹಾಕಿದ್ದಾರೆ.

ಡಿ.ಜೆ. ಹಳ್ಳಿ ಪೊಲೀಸ್ ಠಾಣೆ ಮುಂದೆ ಮಕ್ಕಳು ರೋಧಿಸುವ ದೃಶ್ಯ ಎಲ್ಲರ ಮನಕಲಕುವಂತಿತ್ತು. ಗಲಭೆ ಕೇಸ್​​ನಲ್ಲಿ ಈಗಾಗಲೇ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನೂ ಕೆಲವರು ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ.

ಡಿ.ಜೆ. ಹಳ್ಳಿ ಠಾಣೆ ಮುಂದೆ ಆರೋಪಿಗಳ ಮಕ್ಕಳ ಕಣ್ಣೀರು

ಠಾಣೆ ಮುಂದೆ ಆರೋಪಿಗಳ ಮಕ್ಕಳು ಅಪ್ಪ ಬೇಕು ಎಂದು ಸ್ಟೇಷನ್ ಮುಂದೆ ಹಠ ಹಿಡಿದರು. ಅಪ್ಪಂದಿರನ್ನು ಕಳುಹಿಸಿಕೊಡಿ‌ ಎಂದು ಮಕ್ಕಳು ಗೋಗೆರೆದು ಠಾಣೆಯೊಳಗೆ ಹೋಗಲು ಯತ್ನಿಸಿದರು.

ಈ ವೇಳೆ ಮಹಿಳಾ ಪೊಲೀಸರು ಮಕ್ಕಳು ಮತ್ತು ತಾಯಂದಿರಿಗೆ ಸಾಂತ್ವನ ಹೇಳಿ ಕಳುಹಿಸಿದರು. ಪ್ರತಿದಿನ ಬೀದಿಯಲ್ಲಿ ಕುಳಿತು ಬಂಧನಕ್ಕೊಳಗಾದ ತಮ್ಮವರಿಗಾಗಿ ಹಲವು ದಿನಗಳಿಂದ ಕುಟುಂಬಸ್ಥರು ಕಾದು ಕುಳಿತಿದ್ದಾರೆ.

ABOUT THE AUTHOR

...view details