ಕರ್ನಾಟಕ

karnataka

ETV Bharat / state

12-18 ವಯಸ್ಸಿನ ಮಕ್ಕಳಿಗೆ ಮೊದಲು ಲಸಿಕೆ ನೀಡಬೇಕು : ಡಾ.ಮಂಜುನಾಥ್ - ಕೋವಿಡ್ ಲಸಿಕೆ‌

ಇದೀಗ ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಶುರುವಾಗಿದೆ. ಮೂರನೇ ಅಲೆ ಭೀತಿ ಹಿನ್ನೆಲೆ ಮಕ್ಕಳ ಲಸಿಕೆ ಕುರಿತು ಚರ್ಚೆ ಆರಂಭಿಸಿದೆ. ಲಸಿಕೆ ಬೇಗ ಸಿಕ್ಕಷ್ಟು ಅನುಕೂಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ..

ಡಾ. ಮಂಜುನಾಥ್ ಸಲಹೆ
ಡಾ. ಮಂಜುನಾಥ್ ಸಲಹೆ

By

Published : Oct 27, 2021, 3:18 PM IST

Updated : Oct 27, 2021, 4:14 PM IST

ಬೆಂಗಳೂರು : ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಮಟ್ಟದಲ್ಲಿ ಇಳಿಕೆಯಾಗುತ್ತಿದೆ.‌ ಇನ್ನು 18 ವರ್ಷ ಮೇಲ್ಪಟ್ಟವರು ಶೇ.90 ಮಂದಿ ಕೋವಿಡ್ ಲಸಿಕೆ‌ ಪಡೆದಿದ್ದಾರೆ. ಹೀಗಾಗಿ, ಕೋವಿಡ್ ಸೋಂಕು ಹರಡುವುದು ಬಹುತೇಕ‌ ಕಡಿಮೆಯಾಗಿದೆ.

ಡಾ. ಮಂಜುನಾಥ್ ಸಲಹೆ

ಆದ್ರೆ, ಈ ಮೊದಲು ತಜ್ಞರು ಮೂರನೇ ಅಲೆ ಅತಿ ಹೆಚ್ಚಾಗಿ ಮಕ್ಕಳಲ್ಲಿ ಕಾಣಿಕೊಳ್ಳುತ್ತದೆ ಎಂದು ವರದಿ ಮಾಡಿದ್ದರು. ಅದರಂತೆಯೇ ಸರ್ಕಾರ ಕೂಡ ಮಕ್ಕಳ ಸುರಕ್ಷತೆಗಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದೆ.

ಇದೀಗ ಮಕ್ಕಳಿಗೆ ಲಸಿಕೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಶುರುವಾಗಿದೆ. ಮೂರನೇ ಅಲೆ ಭೀತಿ ಹಿನ್ನೆಲೆ ಮಕ್ಕಳ ಲಸಿಕೆ ಕುರಿತು ಚರ್ಚೆ ಆರಂಭಿಸಿದೆ. ಲಸಿಕೆ ಬೇಗ ಸಿಕ್ಕಷ್ಟು ಅನುಕೂಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮಕ್ಕಳ ಲಸಿಕೆ ಬಂದರೆ 12 ರಿಂದ 18 ವಯಸ್ಸಿನ ಮಕ್ಕಳಿಗೆ ಲಸಿಕೆ ಮೊದಲು ಕೊಡಲು ಸಲಹೆ ನೀಡಲಾಗಿದೆ. ಈ ಬಗ್ಗೆ ಹಿರಿಯ ವೈದ್ಯ ಡಾ. ಮಂಜುನಾಥ್ ಮಾಹಿತಿ ನೀಡಿದ್ದು, 12 ರಿಂದ 18 ವರ್ಷದ ಮಕ್ಕಳಿಗೆ ಮೊದಲು ಲಸಿಕೆ ಕೊಡಬೇಕು‌. ಅಸ್ತಮಾ, ಸಕ್ಕರೆ ಖಾಯಿಲೆ, ಹೃದಯ ಖಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೂ ಲಸಿಕೆ ಪ್ರಿಯಾರಿಟಿಯಾಗಿ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

Last Updated : Oct 27, 2021, 4:14 PM IST

ABOUT THE AUTHOR

...view details