ಬೆಂಗಳೂರು: ಚೆಂಡು ತರಲು ಮಹಡಿಗೆ ತೆರಳಿದ್ದಾಗ ಅಲ್ಲೇ ಹಾದು ಹೋಗಿದ್ದ ಹೈ ಟೆನ್ಶನ್ ವೈರ್ ತಗುಲಿ ಗಾಯಗೊಂಡಿರುವ ಬಾಲಕ ನಿಖಿಲ್ ಕೊಂಚ ಚೇತರಿಕೆ ಕಾಣ್ತಿದ್ದಾನೆಂದು ತಿಳಿದುಬಂದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಆಸ್ಪತ್ರೆ ಸೇರಿದ ಪ್ರಕರಣ... ಚಿಕಿತ್ಸೆಗೆ ಸ್ಪಂದಿಸುತ್ತಿರೋ ನಿಖಿಲ್ - undefined
ಹೈ ಟೆನ್ಶನ್ ವೈರ್ ತಗುಲಿ ಬಾಲಕ ಗಾಯಗೊಂಡಿರುವ ನಿಖಿಲ್ ಎಂಬ ಬಾಲಕ ಕೊಂಚ ಚೇತರಿಕೆ ಕಾಣ್ತಿದ್ದಾನೆಂದು ತಿಳಿದುಬಂದಿದೆ.
ಬಾಲಕನಿಗೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಮುಂಜಾನೆ ಮನೆಯಿಂದ ತಂದ ಆಹಾರವನ್ನ ಸೇವಿಸಿದ್ದಾನೆ. ವಿದ್ಯುತ್ ಸ್ಪರ್ಶದಿಂದ ಶೇ. 50 ರಷ್ಟು ಬಾಲಕನ ದೇಹ ಸುಟ್ಟು ಹೋಗಿದ್ದು, ಮೂರ್ನಾಲ್ಕು ದಿನಗಳ ಬಳಿಕ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಬಾಲಕ ಮತ್ತಿಕೇರೆ ಸಮೀಪದ ನೇತಾಜಿ ವೃತ್ತದಲ್ಲಿ ತನ್ನ ತಂದೆ- ತಾಯಿ ಜೊತೆ ವಾಸವಿದ್ದ. ಬೇಸಿಗೆ ರಜೆ ಹಿನ್ನೆಲೆ ಮಕ್ಕಳೆಲ್ಲಾರ ಜೊತೆ ಸೇರಿ ಜೆ.ಪಿ. ಪಾರ್ಕ್ ಉದ್ಯಾನದ ಬಳಿ ಇರುವ ಮೈದಾನದಲ್ಲಿ ಕ್ರಿಕೆಟ್ ಆಡ್ತಿದ್ರು. ಆದ್ರೆ ನಿನ್ನೆ ಕೂಡ ಅಲ್ಲೆ ಆಟವಾಡಲು ಹೋದಾಗ ನಿಖಿಲ್ ಗೆಳೆಯ ಚೆಂಡನ್ನ ಮೇಲಕ್ಕೆ ಎಸೆದು ಕ್ಯಾಚ್ ಹಿಡಿಯುವಂತೆ ಹೇಳಿದ್ದಾನೆ. ಆದ್ರೆ ಚೆಂಡು ಮಹಡಿಗೆ ಬಿದ್ದ ಕಾರಣ ಅದನ್ನ ತರಲು ಹೋದಾಗ ಅಲ್ಲೆ ಇದ್ದ ಹೈ ಟೆನ್ಶನ್ ವೈರ್ ನಿಖಿಲ್ಗೆ ತಗುಲಿದೆ.