ಬೆಂಗಳೂರು:ನಗರದಲ್ಲಿ ಮತ್ತೆ ಮಕ್ಕಳ ಕಳ್ಳರು ಕಾಣಿಸಿಕೊಂಡಿದ್ದಾರೆ ಎಂಬ ವದಂತಿ ಹರಡುತ್ತಿದ್ದು, ಇದಕ್ಕೆ ಕಿವಿಗೊಡಬಾರದು ಎಂದುನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಮಕ್ಕಳ ಕಳ್ಳತನ ವದಂತಿಗೆ ಕಿವಿಗೊಡಬೇಡಿ: ಪೊಲೀಸ್ ಆಯುಕ್ತರ ಟ್ವೀಟ್ - ಅಲೋಕ್ ಕುಮಾರ್ ಟ್ವೀಟ್
ವದಂತಿಗಳನ್ನ ನಂಬುವ ಮತ್ತು ಹರಡುವ ಮುನ್ನ ದಯವಿಟ್ಟು ಪರಿಶೀಲಿಸಿಕೊಳ್ಳಿ. ಸುಳ್ಳು ಸುದ್ದಿ ಹರಡುವವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ದಯವಿಟ್ಟು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಪೊಲೀಸ್ ಕಮಿಷನರ್ ಅಲೋಕ್ ಕುಮಾರ್
ಮಕ್ಕಳ ಕಳ್ಳತನವಾಗುತ್ತಿರುವ ಬಗ್ಗೆ ಕೆಲವರು ವದಂತಿ ಹರಡುತ್ತಿದ್ದಾರೆ. ಇಂತಹ ವದಂತಿ ಹರಡುವ ಮುನ್ನ ದಯವಿಟ್ಟು ಪರಿಶೀಲಿಸಿ. ಸುಳ್ಳು ಸುದ್ದಿ ಹರಡುವವರಿಗೆ ಕಾನೂನಿನಡಿ ಶಿಕ್ಷೆ ವಿಧಿಸಲಾಗುತ್ತದೆ. ಸಾರ್ವಜನಿಕರು ದಯವಿಟ್ಟು ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಟ್ವೀಟ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಈ ಹಿಂದೆ ಮಕ್ಕಳ ಕಳ್ಳರು ಎಂದು ಅನುಮಾನಿಸಿ ಅಮಾಯಕರ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ್ದರು. ಇಂತಹ ಘಟನೆಗಳು ಮರುಕಳಿಸಬಾರದೆಂದು ಟ್ವೀಟ್ ಮೂಲಕ ನಾಗರಿಕರನ್ನು ಎಚ್ಚರಿಸಿದ್ದಾರೆ.
Last Updated : Jul 28, 2019, 4:59 AM IST