ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಸಂಪ್​ಗೆ ಬಿದ್ದ ಮಗು... ಬದುಕುಳಿದಿದ್ದು ಹೇಗೆ ಗೊತ್ತಾ! - ಸಂಪ್​ಗೆ ಬಿದ್ದ ಮಗು

ಸಂಪ್​ಗೆ ನೀರು ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಮಗುವೊಂದು ಅದರೊಳಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Child fall in open sump in Electronic city
Child fall in open sump in Electronic city

By

Published : Apr 13, 2021, 10:09 PM IST

ಬೆಂಗಳೂರು: ಟ್ಯಾಂಕರ್​​ ನೀರು ಸಂಪ್​ಗೆ ತುಂಬಿಸುವಾಗ ದಿಢೀರ್​ ಆಗಿ ಪುಟ್ಟ ಮಗುವೊಂದು ಅದರೊಳಗೆ ಬಿದ್ದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್​​ ಸಿಟಿ ಬಳಿ ನಡೆದಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ.

ನೋಡನೋಡುತ್ತಲೇ ಸಂಪ್​ಗೆ ಬಿದ್ದ ಮಗು

ಮನೆ ಹೊರಗಡೆ ಆಟವಾಡುತ್ತಿದ್ದ ಮಗು ಓಪನ್​ ಇದ್ದ ಸಂಪ್​​ನೊಳಗೆ ಬಿದ್ದಿದೆ. ಆದರೆ ಪೋಷಕರ ಸಮಯಪ್ರಜ್ಞೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಬಳಿಯಿರುವ ಸಾಯಿ ಬಾಲಾಜಿ ಆಂಧ್ರ ಮೆಸ್ ಹೋಟೆಲ್​​ನ ಪಕ್ಕದ ಮನೆಯೊಂದರ ಸಂಪ್​ಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿತ್ತು. ಈ ವೇಳೆ ಸಂಪ್​ ಓಪನ್​ ಇದ್ದು, ಅದರಲ್ಲಿ ಮಗು ಬಿದ್ದಿದೆ. ಅದರ ಪಕ್ಕದಲ್ಲೇ ವಾಹನ ಓಡಾಡುತ್ತಿದ್ದರೂ ಮಗು ಸಂಪ್​ನೊಳಗೆ ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ.

ಕೆಲ ಕ್ಷಣವಾದರೂ ಮಗು ಬಿದ್ದಿರುವುದು ಯಾರ ಗಮನಕ್ಕೂ ಬಂದಿಲ್ಲ. ಬಳಿಕ ಪೋಷಕರು ಹೊರ ಬಂದು ನೋಡಿದಾಗ‌ ಮಗು ಕಾಣಿಸಿಲ್ಲ. ತಕ್ಷಣವೇ ಸಂಪ್ ಬಳಿ ಬಂದು ನೋಡಿದಾಗ ಮಗು ಬಿದ್ದಿರುವುದು ಕಂಡಿದೆ. ಕೂಡಲೇ ಸಂಪ್​ನೊಳಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಇದಾದ ಬಳಿಕ ಹೊರಕ್ಕೆ ಬಂದ ತಾಯಿ ಮಗುವನ್ನ ಎತ್ತಿಕೊಂಡು ಆರೈಕೆ ಮಾಡಿದ್ದಾರೆ. ಮಗುವಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ABOUT THE AUTHOR

...view details