ಕರ್ನಾಟಕ

karnataka

ETV Bharat / state

ಬೆಂಗಳೂರು: ವಾಟರ್ ಟ್ಯಾಂಕರ್ ವಾಹನ ಹರಿದು ಮೂರು ವರ್ಷದ ಬಾಲಕ ಸಾವು - ಬೆಂಗಳುರಲ್ಲಿ ವಾಹನಕ್ಕೆ ಸಲುಕಿ ಮಗು ಸಾವು

ಪಕ್ಕದ ಅಪಾರ್ಟ್​ಮೆಂಟ್​ ಮನೆಯವರು ಟ್ಯಾಂಕರ್​ನಲ್ಲಿ ನೀರು ತರಿಸಿಕೊಂಡಿದ್ದರು. ನೀರನ್ನು ಅನ್​ಲೋಡ್​ ಮಾಡಿ ವಾಹನವನ್ನು ರಿವರ್ಸ್​ ತೆಗೆಯುವಾಗ ಆಟ ಆಡುತ್ತಿದ್ದ ಮಗುವಿನ ಮೇಲೆ ವಾಹನ ಹರಿದಿದೆ.

ವಾಟರ್ ಟ್ಯಾಂಕರ್ ವಾಹನ ಹರಿದು ಮೂರು ವರ್ಷದ ಮಗು ಸಾವು
ವಾಟರ್ ಟ್ಯಾಂಕರ್ ವಾಹನ ಹರಿದು ಮೂ ವಾಟರ್ ಟ್ಯಾಂಕರ್ ವಾಹನ ಹರಿದು ಮೂರು ವರ್ಷದ ಮಗು ಸಾವುರು ವರ್ಷದ ಮಗು ಸಾವು

By

Published : May 26, 2022, 5:49 PM IST

Updated : May 26, 2022, 6:15 PM IST

ಬೆಂಗಳೂರು: ವಾಟರ್ ಟ್ಯಾಂಕರ್ ವಾಹನ ಹರಿದ ಪರಿಣಾಮ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ದುರ್ಘಟನೆ ಸರ್ಜಾಪುರ‌ ರಸ್ತೆ ಸೆರಿನಿಟಿ ಲೇಔಟ್ ನ ಶ್ವೇತ ರೆಸಿಡೆನ್ಸಿ ಅಪಾರ್ಟ್ ಮೆಂಟ್​ ಬಳಿ ನಡೆದಿದೆ. ಪ್ರತಿಷ್ಟ್ ಸಾವಿಗೀಡಾದ ಮಗು.

ನೇಪಾಳ ಮೂಲದ ಜಯಂತಿ-ಕೀಮ್ ರಾಜ್ ದಂಪತಿ ಕಳೆದ ಐದಾರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ‌. ಕೀಮ್ ರಾಜ್ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಅಪಾರ್ಟ್ ಮೆಂಟ್ ಮನೆಯವರು ಟ್ಯಾಂಕರ್​ನಲ್ಲಿ ನೀರು ತರಿಸಿಕೊಂಡಿದ್ದರು. ನೀರನ್ನು ಅನ್​ಲೋಡ್​ ಮಾಡಿ ವಾಹನವನ್ನು ರಿವರ್ಸ್​ ತೆಗೆಯುವಾಗ ಆಟ ಆಡುತ್ತಿದ್ದ ಮಗುವಿನ ಮೇಲೆ ಹರಿದಿದೆ.

ವಾಟರ್ ಟ್ಯಾಂಕರ್ ವಾಹನ ಹರಿದು ಮೂರು ವರ್ಷದ ಮಗು ಸಾವು

ಚಕ್ರಕ್ಕೆ ಸಿಲುಕಿದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪೋಷಕರ ಆಕ್ರಂದನ‌ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ‌ ಹೆಚ್.ಎಸ್ ಆರ್.ಲೇಔಟ್ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:'ರಜತ್' ಆರ್​ಸಿಬಿ ಸೇರಿದ್ದು ರೋಚಕ.. ಮದುವೆಗೆ ಸಿದ್ಧವಾಗ್ತಿದ್ದ ಪಾಟಿದಾರ್​​ ದಿಢೀರ್ ತಂಡ ಸೇರಿದ್ಹೇಗೆ!?

Last Updated : May 26, 2022, 6:15 PM IST

For All Latest Updates

TAGGED:

ABOUT THE AUTHOR

...view details