ಕರ್ನಾಟಕ

karnataka

ETV Bharat / state

ಬಿಬಿಎಂಪಿ ತ್ಯಾಜ್ಯ ಸಂಸ್ಕರಣ ಘಟಕದಿಂದ ಅವ್ಯವಸ್ಥೆ: ಗ್ರಾಮಸ್ಥರಿಂದ ಪ್ರತಿಭಟನೆ - Etv Bharat Kannada

ಬಿಬಿಎಂಪಿ ತ್ಯಾಜ್ಯ ಸಂಸ್ಕರಣ ಘಟಕದಿಂದ ಚಿಕ್ಕನಾಗಮಂಗಲ ಗ್ರಾಮಸ್ಥರಿಗೆ ಅವ್ಯವಸ್ಥೆ ಉಂಟಾದ ಹಿನ್ನೆಲೆ ಕಸ ವಿಲೇವಾರಿ ಘಟಕದ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

kn_bng_01_18_protest_ka10020
ಗ್ರಾಮಸ್ಥರ ಪ್ರತಿಭಟನೆ

By

Published : Aug 18, 2022, 7:35 PM IST

ಆನೇಕಲ್: ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ಕೊಚ್ಚೆ ನೀರು ಕೆರೆಗೆ ಹರಿಯುವುದಲ್ಲದೆ ಸುತ್ತಲ ಗ್ರಾಮಸ್ಥರಿಗೆ ದುರ್ನಾತ ಬೀರಿದ್ದು ನೊಣಗಳ ಹೆಚ್ಚಳದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಾಗಿ ಎಂದು ಆರೋಪಿಸಿ ಚಿಕ್ಕನಾಗಮಂಗಲದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶಾಂತಿಪುರ ಗ್ರಾಮ ಪಂಚಾಯಿತಿಯಿಂದ ಚಿಕ್ಕ ನಾಗಮಂಗಲಕ್ಕೆ ಬಿಡುಗಡೆಯಾಗಬೇಕಿದ್ದ ಅನುದಾನ ಮೂಲಭೂತ ಸೌಕರ್ಯಗಳ ಕಾಮಗಾರಿಗಳೆಲ್ಲವೂ ಬೇರೆಡೆಗೆ ವರ್ಗಾಯಿಸುತ್ತಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಹುಸ್ಕೂರು ಚಿಕ್ಕನಾಗಮಂಗಲ ಕಸ ವಿಲೇವಾರಿ ಘಟಕದ ಎದುರು ಪ್ರತಿಭಟನೆ ಹಮ್ಮಿಕೊಂಡರು.

ಸ್ಥಳಕ್ಕಾಗಮಿಸಿದ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್ ಮಾತನಾಡಿ, ನಮಗೆ ಘನತಾಜ್ಯ ಸಮಸ್ಯೆ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ. ಮಳೆ ಬಂದಾಗ ಕಸದ ಕೊಚ್ಚೆ ರಸ ನೀರು ಗುಂಡಿಗೆ ಸೇರದೇ ನೀರಿನ ಹರಿವಿನಲ್ಲಿ ಕೆರೆಗೆ ಹೋಗಿರಬಹುದು. ಘಟಕದ ಒಳಗಡೆ ಕೊಚ್ಚೆ ನೀರಿನ ಅತ್ಯಾಧುನಿಕ ಸಂಸ್ಕರಣವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಎರಡು ತಿಂಗಳ ಗಡುವು ಅಗತ್ಯವಿದೆ. ಅಲ್ಲಿಯವರೆಗೂ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮಸ್ಥರಿಂದ ಪ್ರತಿಭಟನೆ

ಅಲ್ಲದೆ ಚಿಕ್ಕನಾಗಮಂಗಲಕ್ಕೆ ಅನುದಾನ ಮತ್ತು ಕಾಮಗಾರಿಗಳನ್ನು ಬೇರೆಡೆಗೆ ವರ್ಗಾಯಿಸಿಲ್ಲ. ಶೀಘ್ರವೇ ಎಲ್ಲ ಮೂಲಭೂತ ಸೌಕರ್ಯಗಳಿಗೂ ಚಾಲನೆ ಕೊಡಲಾಗುವುದು ಎಂಬ ಭರವಸೆಯನ್ನೂ ನೀಡಿದರು.

ಇದನ್ನೂ ಓದಿ:ರಾಯಚೂರು ಸೇರ್ಪಡೆ ಬಗ್ಗೆ ತೆಲಂಗಾಣ ಸಿಎಂ ಹೇಳಿಕೆ: ಬೊಮ್ಮಾಯಿ ಹೇಳಿದ್ದೇನು?

ABOUT THE AUTHOR

...view details