ಯಲಹಂಕ:ಜಮೀನು ಖರೀದಿದಾರನಿಗೆ ರಕ್ಷಣೆ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ದಾಳಿ ಹಿನ್ನೆಲೆ ಚಿಕ್ಕಜಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಯಾರಿಗೂ ಸಿಗದೆ ನಾಪತ್ತೆಯಾಗಿದ್ದು, ಈ ಬಗ್ಗೆ ಎಸಿಬಿ ಅಧಿಕಾರಿಗಳು ಡಿಜಿ ಮತ್ತು ಐಜಿಪಿಗೆ ವರದಿ ನೀಡಲು ಮುಂದಾಗಿದೆ.
5 ದಿನವಾದ್ರೂ ಪತ್ತೆಯಾಗದ ಚಿಕ್ಕಜಾಲ ಇನ್ಸ್ಪೆಕ್ಟರ್ : ಡಿಜಿ, ಐಜಿಪಿಗೆ ವರದಿ ಸಲ್ಲಿಸಲು ಮುಂದಾದ ಎಸಿಬಿ - ಚಿಕ್ಕಜಾಲ ಇನ್ಸ್ಪೆಕ್ಟರ್
ಎಸಿಬಿ ದಾಳಿ ಹಿನ್ನೆಲೆ ಚಿಕ್ಕಜಾಲ ಇನ್ಸ್ ಪೆಕ್ಟರ್ ಯಶವಂತ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಎಸಿಬಿ ಶೋಧ ಕಾರ್ಯ ಮುಂದುವರೆಸಿದೆ.
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಹೋಬಳಿಯಲ್ಲಿ ಜಮೀನು ಖರೀದಿದಾರ ಕೋರ್ಟ್ ತಡೆಯಾಜ್ಞೆಯ ಬೋರ್ಡ್ ಅನ್ನು ಜಮೀನಿಗೆ ಹಾಕಲು ಚಿಕ್ಕಜಾಲ ಪೊಲೀಸರ ರಕ್ಷಣೆ ಕೇಳಿದೆ. ಪೊಲೀಸ್ ರಕ್ಷಣೆ ನೀಡಲು ಇನ್ಸ್ ಪೆಕ್ಟರ್ ಯಶವಂತ್ ಪರವಾಗಿ ಕಾನ್ಸ್ ಟೇಬಲ್ ರಾಜು 6 ಲಕ್ಷ ಪಡೆದು ಎಸಿಬಿ ಬಲೆಗೆ ಬಿದ್ದಿದ್ದರು ಎನ್ನಲಾಗ್ತಿದೆ.
ಎಸಿಬಿ ದಾಳಿಯ ವಿಷಯ ತಿಳಿದ ಇನ್ಸ್ಪೆಕ್ಟರ್ ಯಶವಂತ್ ಜನವರಿ 8 ರಿಂದ ಠಾಣೆಗೆ ಬರದೆ ಅಧಿಕಾರಿಗಳ ಗಮನಕ್ಕೂ ತರದೆ ನಾಪತ್ತೆಯಾಗಿದ್ದಾರೆ. ಡೈರಿ ಮತ್ತು ರಿವಾಲ್ವರ್ನ್ನು ಇಲಾಖೆಗೆ ಕೊಡದೆ ನಾಪತ್ತೆಯಾಗಿರುವ ಯಶವಂತ್ ಪತ್ತೆಗಾಗಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.