ಕರ್ನಾಟಕ

karnataka

ETV Bharat / state

ನಾಳೆ ಕಾವೇರಿ ನದಿಗೆ ಬಾಗಿನ ಅರ್ಪಿಸ್ತಾರೆ ಮುಖ್ಯಮಂತ್ರಿ ಯಡಿಯೂರಪ್ಪ.. - ಚಾಮುಂಡಿ ದೇವಿಯ ದರ್ಶನ

ನಾಳೆ ಕಾವೇರಿ ನದಿಗೆ ಬಾಗಿನ ಅರ್ಪಿಸಲಿರುವ ಸಿಎಂ ಬಿಎಸ್​ವೈ, ಕೊಡಗಿಗೆ ತೆರಳಿ ನೆರೆ ಸಂತ್ರಸ್ತರನ್ನ ಭೇಟಿ ಮಾಡಲಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

By

Published : Aug 28, 2019, 12:29 PM IST

ಬೆಂಗಳೂರು:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಾಳೆ ಮೈಸೂರಿಗೆ ಭೇಟಿನೀಡಿ ಶ್ರೀ ಚಾಮುಂಡಿ ದೇವಿಯ ದರ್ಶನ ಪಡೆಯಲಿದ್ದಾರೆ. ಮಂಡ್ಯದಲ್ಲಿರುವ ಕೆಆರ್‌ಎಸ್​ ಡ್ಯಾಂಗೆ ಬಾಗಿನ ಅರ್ಪಿಸಲಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ..

ಈ ಬಗ್ಗೆ ತಮ್ಮ ನಿವಾಸದ ಬಳಿ ಮಾತನಾಡಿದ ಸಿಎಂ ಬಿಎಸ್‌ವೈ, ನಾಳೆ ಮೈಸೂರಿಗೆ ಹೋಗಲಿದ್ದೇನೆ. ಚಾಮುಂಡಿ ಬೆಟ್ಟದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಕೆಆರ್‌ಎಸ್​ನಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸುತ್ತೇನೆ. ಅಲ್ಲಿಂದ ಕೊಡಗು ಜಿಲ್ಲೆಗೆ ಹೋಗಿ, ಸಂತ್ರಸ್ತರ ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸಿಎಂ ನಿವಾಸಕ್ಕೆ ಅಸಮಾಧಾನಿತ ಶಾಸಕ ಗೂಳಿಹಟ್ಟಿ ಶೇಖರ್:
ಇವತ್ತು ಸಿಎಂ ಬಿಎಸ್‌ವೈ ಅವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಅಸಮಧಾನಿತ ಶಾಸಕ ಗೂಳಿಹಟ್ಟಿ ಶೇಖರ್ ಭೇಟಿ ನೀಡಿದರು.‌ ಸಂಸದ ರಾಘವೇಂದ್ರ ತಮ್ಮ ತಾಲೂಕಿನಲ್ಲಿ ಪಿಎಸ್‌ಐವೊಬ್ಬರ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಈ ಬಗ್ಗೆ ಸಿಎಂ ಬಿಎಸ್‌ವೈ ಜತೆಗೆ ಮಾತನಾಡನಾಡಿದರೇ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಮಾಧ್ಯಮದವರು ಈ ಕುರಿತಂತೆ ಅವರನ್ನ ಪ್ರತಿಕ್ರಿಯೆ ಕೇಳಿದಾಗ ಕೈಮುಗಿದು ಅಲ್ಲಿಂದ ಹೊರಟೇ ಬಿಟ್ಟರು.

ABOUT THE AUTHOR

...view details