ಬೆಂಗಳೂರು: ನಾರಾಯಣ ಗುರುಗಳು ಜಗಜ್ಯೋತಿ ಬಸವೇಶ್ವರರಂತೆ ಸಮಾಜ ಸುಧಾರಣೆ ಮಾಡಿದವರು. ನಾರಾಯಣ ಗುರುಗಳು ಸರಳ ವಿಚಾರದಿಂದ ಜನರಿಗೆ ತಲುಪಿದವರು ಎಂದು ಸಿಎಂ ಬಿಎಸ್ವೈ ತಿಳಿಸಿದರು.
ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಒಂದೇ ಜಾತಿ, ಒಂದೇ ದೇವರು, ಒಂದೇ ತತ್ವವನ್ನ ಪ್ರತಿಪಾದಿಸಿಕೊಂಡು ಬಂದವರು, ಹರಿಜನ ಮಕ್ಕಳಿಗೆ ಸಂಸ್ಕೃತವನ್ನ ಆ ಕಾಲದಲ್ಲೇ ಕಲಿಸಿದ ಮಹಾನ್ ವ್ಯಕ್ತಿ. ಅವರ ಅದರ್ಶವನ್ನು ನಾವೂ ಪಾಲಿಸಬೇಕು ಆಗ ಅವರ ಜಯಂತಿ ಮಾಡಿದ್ದಕ್ಕೂ ಸಾರ್ಥಕವಾಗುತ್ತೆ ಎಂದರು.