ಬೆಂಗಳೂರು :ಆಂಗ್ಲ ದಿನ ಪತ್ರಿಕೆಯ ದೆಹಲಿ ಆವೃತಿಯಲ್ಲಿ ಜುಲೈ 19ರಂದು ಪ್ರಕಟವಾಗಿರುವ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾವಚಿತ್ರ ಬಿಟ್ಹೋಗಿದೆ. ನಾಯಕತ್ವ ಬದಲಾವಣೆ ಚರ್ಚೆ ನಡುವೆ ನಡೆದಿರುವ ಈ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟೀಕರಣ ನೀಡಿ ತಪ್ಪನ್ನು ಜಾಹೀರಾತು ಏಜೆನ್ಸಿ ಮೇಲೆ ಹೊರಿಸಿದ್ದಾರೆ.
ಯಡಿಯೂರಪ್ಪ ಭಾವಚಿತ್ರ ಜಾಹೀರಾತಿನಲ್ಲಿ ಪ್ರಕಟವಾಗದಿರುವುದು ಜಾಹೀರಾತು ಏಜೆನ್ಸಿಯಿಂದ ಆಗಿರುವ ಪ್ರಮಾದವಾಗಿದೆ. ಕೇಂದ್ರ ಸರ್ಕಾರ ನೂತನವಾಗಿ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಆರಂಭಿಸಿರುವುದಕ್ಕೆ ಬೀರೇಶ್ವರ ಕೋ ಆಪರೇಟಿವ್ ಸೊಸೈಟಿ ಲಿ. ನವರು ಜಾಹೀರಾತು ನೀಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ನೆಚ್ಚಿನ ನಾಯಕರಾಗಿದ್ದು, ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿದವಳಾಗಿದ್ದೇನೆ. ಜಾಹೀರಾತಿನಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟಿಸದಿರುವುದು ನನಗೂ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.