ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟಿಂಗ್ ಸಂಬಂಧ ತ್ವರಿತವಾಗಿ ಖಾಸಗಿ ಲ್ಯಾಬ್‌ಗಳ ಜೊತೆ ಮಾತನಾಡಿ 24 ಗಂಟೆಯೊಳಗಾಗಿ ಪರೀಕ್ಷಾ ಫಲಿತಂಶವನ್ನ ನೀಡಲು ಸೂಚನೆ ನೀಡಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಸೋಂಕು ಸಂಬಂಧ ಎಲ್ಲಾ 8 ವಲಯ ಆರೋಗ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳ ಜೊತೆ ನಡೆದ ವರ್ಚುವಲ್ ಸಭೆಯಲ್ಲಿ ಮುಖ್ಯ ಆಯುಕ್ತರು ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡುವ ವೇಳೆ ಕೋವಿಡ್ ಸ್ವಾಬ್ ಸಂಗ್ರಹಗಾರರು ಪೋರ್ಟಲ್‌ನಲ್ಲಿ ನಿಖರವಾದ ಮೊಬೈಲ್ ಸಂಖ್ಯೆ, ಸಮರ್ಪಕ ವಿಳಾಸ ಹಾಗೂ ಕಡ್ಡಾಯ ಪಿನ್ ಕೋಡ್ ಅನ್ನು ನಮೂದಿಸಬೇಕು ಹಾಗೂ ಖಾಸಗಿ ಲ್ಯಾಬ್‌ಗಳಲ್ಲಿ 24 ಗಂಟೆಯೊಳಗಾಗಿ ಪರೀಕ್ಷಾ ಫಲಿತಾಂಶವನ್ನು ನೀಡಲು ಸೂಚನೆ ನೀಡಬೇಕು. ಆ ಮೂಲಕ ತ್ವರಿತವಾಗಿ ಬಿಯು ಸಂಖ್ಯೆ ರಚಿಸಲು ಕ್ರಮವಹಿಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ರವರು ಸೂಚನೆ ನೀಡಿದರು.
ನಗರದಲ್ಲಿ ಕೋವಿಡ್ ಪರೀಕ್ಷೆ ಮಾಡಿದ ನಂತರ ಲ್ಯಾಬ್ಗಳು ತಡವಾಗಿ ಫಲಿತಾಂಶ ನೀಡುತ್ತಿರುವುದರಿಂದ ಸಾಕಷ್ಟು ಮಂದಿಗೆ ಸಮಸ್ಯೆಯಾಗುತ್ತಿದೆ. ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷಾ ಫಲಿತಾಂಶವನ್ನು ತೀರಾ ತಡವಾಗಿ ನೀಡುತ್ತಿದ್ದು, ಅವರಿಗೆ 24 ಗಂಟೆಯೊಳಗಾಗಿ ನೀಡುವಂತೆ ಸೂಚನೆ ನೀಡಬೇಕು. ಸ್ವಾಬ್ ಸಂಗ್ರಹಿಸುವ ವೇಳೆ ಪೋರ್ಟಲ್‌ನಲ್ಲಿ ಸರಿಯಾದ ಮಾಹಿತಿ ಅಪ್ಲೋಡ್ ಮಾಡದ್ದಿದ್ದರೆ ಟ್ರೇಸಿಂಗ್ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಸರಿಯಾದ ಮಾಹಿತಿಯನ್ನು ಸಂಗ್ರಹಿಸಬೇಕೆಂದು ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದಗ್ರಗಳಲ್ಲಿ ಅವಶ್ಯಕ ಔಷಧ ಸಂಗ್ರಹ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಮಟ್ಟದ ಸಿಬ್ಬಂದಿಗಳಿಗೆ ಸುರಕ್ಷತಾ ಉಪಕರಣಗಳನ್ನು ಖರೀದಿಸುವ ಸಂಬಂಧ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 2 ಲಕ್ಷ ರೂ. ಹಾಗೂ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿನ ಆರೋಗ್ಯ ವೈದ್ಯಾಧಿಕಾರಿಗಳಿಗೆ ತಲಾ 25 ಲಕ್ಷ ರೂ. ಗಳನ್ನು ಬಿಡುಗಡೆಗೊಳಿಸಲಾಗಿದ್ದು, ಕೋವಿಡ್-19 ಔಷದಿಗಳು ಮತ್ತು ಇತರೆ ಪರಿಕರಗಳನ್ನು ತುರ್ತಾಗಿ ಖರೀದಿಸಬಹುದಾಗಿದೆ.. ಅದನ್ನು ಬಳಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನಿಡಿದರು.
ವಲಯಗಳ ವಿವರ:
1. ದಾಸರಹಳ್ಳಿ ವಲಯ: 6 ಪ್ರಾಥಮಿಕ ಆರೋಗ್ಯ ಕೇಂದಗಳು.