ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಏನ್ ಸಿಗುತ್ತೋ ಬಿಡುತ್ತೋ ಆದರೆ ಗುಂಡಿಗಳು ಮಾತ್ರ ಪ್ರತಿ ರಸ್ತೆಯಿಂದ ಹಿಡಿದು ಗಲ್ಲಿ ಗಲ್ಲಿಯಲ್ಲೂ ಸಿಗುತ್ತೆ. ಇಂತಹ ಗುಂಡಿಗಳನ್ನ ಮುಚ್ಚುವ ಕಾರ್ಯ ನಡೆಯುತ್ತಲಿದ್ದು, ಇದೀಗ ಅದಕ್ಕಾಗಿ ಹೊಸ ತಂತ್ರಜ್ಞಾನವುಳ್ಳ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ಇಂದು ಪೂರ್ವ ವಲಯದ ಕೆಲವು ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಪೈಥಾನ್ ಯಂತ್ರದ ಮೂಲಕ ಮುಚ್ಚುತ್ತಿರುವ ಸ್ಥಳಕ್ಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಪೈಥಾನ್ನ ಕಾರ್ಯಚಟುವಟಿಕೆ ವೀಕ್ಷಿಸಿದರು ನಗರದ ಪೂರ್ವ ವಲಯದಲ್ಲಿ 17 ರಸ್ತೆ, ಪಶ್ಚಿಮ ವಲಯದಲ್ಲಿ 37 ರಸ್ತೆ, ದಕ್ಷಿಣ ವಲಯದಲ್ಲಿ 32 ರಸ್ತೆ, ಆರ್.ಆರ್.ನಗರ ವಲಯದಲ್ಲಿ 8 ರಸ್ತೆಗಳು ಹಾಗೂ 28 ಸಬ್ ಆರ್ಟಿರಿಯಲ್ ರಸ್ತೆ ಸೇರಿದಂತೆ 180 ಕಿ.ಮೀ ಉದ್ದದ 122 ರಸ್ತೆಗಳನ್ನು ವಿಶೇಷ ತಾಂತ್ರಿಕ ಪರಿಣಿತಿ ಹೊಂದಿರುವ ಪೈಥಾನ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ನಿಯೋಜಿಸಲಾಗಿದೆ.
ಪೈಥಾನ್ಯಂತ್ರದ ಚಟುವಟಿಕೆಗಳನ್ನು ಮುಖ್ಯ ಆಯುಕ್ತ ನಗರದ ಎಂಜಿ ರಸ್ತೆ, ಕಬ್ಬನ್ ರಸ್ತೆಯಲ್ಲಿ ವೀಕ್ಷಿಸಿದರು. ಪೈಥಾನ್ಯಂತ್ರಗಳಿಗೆ ನಿಯೋಜನೆ ಮಾಡಿರುವ ರಸ್ತೆಗಳಲ್ಲಿ ರಸ್ತೆ ಗುಂಡಿಗಳಿಲ್ಲದಂತೆ ಖಾತ್ರಿ ಪಡಿಸಿಕೊಳ್ಳುವಂತೆ ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ಮುಂಬರುವ ಬಜೆಟ್ನಲ್ಲಿ ರಾಜ್ಯದ ಭವಿಷ್ಯ ಅನಾವರಣ: ಸಿಎಂ ಭರವಸೆ