ಬೆಂಗಳೂರು:ಹೊಸಗುಡ್ಡದಹಳ್ಳಿ ಕೆಮಿಕಲ್ ಗೋದಾಮು ಸ್ಫೋಟ ಪ್ರಕರಣ ಸಂಬಂಧ ಬ್ಯಾಟರಾಯನಪುರ ಪೊಲೀಸರು ಫ್ಯಾಕ್ಟರಿ ಮಾಲೀಕರನ್ನು ಬಂಧಿಸಿದ್ದಾರೆ.
ಕೆಮಿಕಲ್ ಗೋದಾಮು ಸ್ಫೋಟ.. ಬ್ಯಾಟರಾಯನಪುರ ಪೊಲೀಸರಿಂದ ಫ್ಯಾಕ್ಟರಿ ಮಾಲೀಕರ ಬಂಧನ - ಹೊಸಗುಡ್ಡದಹಳ್ಳಿಯಲ್ಲಿ ಕೆಮಿಕಲ್ ಗೋದಾಮು ಸ್ಫೋಟ ಪ್ರಕರಣ
ಹೊಸಗುಡ್ಡದಹಳ್ಳಿ ಕೆಮಿಕಲ್ ಗೋದಾಮು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸರು ಪ್ಯಾಕ್ಟರಿ ಮಾಲೀಕರನ್ನು ಬಂಧಿಸಿ, ವಿಚಾರಣೆ ಒಳಪಡಿಸಿದ್ದಾರೆ.
ಬಂಧನ
ಮಾಲೀಕರಾದ ಸಜ್ಜನ್ ರಾಜ್ ಮತ್ತು ಪತ್ನಿ ಕಮಲಾ, ಮಗ ಅನಿಲ್ ಬಂಧಿತರು. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪರವಾನಗಿ ಪಡೆಯದೆ ಗೋಡೌನ್ ನಡೆಸುತ್ತಿದ್ದ ಆರೋಪದ ಮೇಲೆ ವಿಚಾರಣೆ ನಡೆಸಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಘಟನೆಯಿಂದ ಸುಮಾರು 4 ಕೋಟಿ ರೂಪಾಯಿಯಷ್ಟು ನಷ್ಟವಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಆರೋಪಿಗಳ ವಿಚಾರಣೆ ಬಳಿಕ ವರದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ನೀಡಲಿದ್ದಾರೆ.
Last Updated : Nov 12, 2020, 10:17 AM IST