ಕರ್ನಾಟಕ

karnataka

ETV Bharat / state

ಕೆಮಿಕಲ್ ಫ್ಯಾಕ್ಟರಿ ಅಗ್ನಿ ದುರಂತ: ಅಗ್ನಿಶಾಮಕ ಸಿಬ್ಬಂದಿಗೆ ಗಾಯ - fire fighters

ರೇಖಾ ಕೆಮಿಕಲ್ ಅಗ್ನಿ ದುರಂತ ಕಾರ್ಯಾಚರಣೆಯಲ್ಲಿ ತೊಡಗಿರುವ ಎಂಟು ಮಂದಿ ಅಗ್ನಿ ಶಾಮಕ‌ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Rekha Chemicals Goden
ರೇಖಾ ಕೆಮಿಕಲ್ಸ್ ಗೋಡನ್​

By

Published : Nov 11, 2020, 10:47 AM IST

Updated : Nov 11, 2020, 11:05 AM IST

ಬೆಂಗಳೂರು:ಮೈಸೂರು ರಸ್ತೆಯ ಬಾಪುಜಿ ನಗರದ ರೇಖಾ ಕೆಮಿಕಲ್​ ಗೋಡೌನ್​ನಲ್ಲಿ ಮಂಗಳವಾರ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ರೇಖಾ ಕೆಮಿಕಲ್​ ಗೋಡೌನ್ ನಲ್ಲಿ ಬೆಂಕಿ ಅವಘಡದಿಂದ ಅಗ್ನಿ ಶಾಮಕ ಸಿಬ್ಬಂದಿಗೆ ಗಾಯ

ರಾಸಾಯನಿಕ ಗೋಡೌನ್​ ಆಗಿದ್ದರಿಂದ ಬೆಂಕಿಯನ್ನು ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಂಟ್ರೋಲ್‌ ಅಂಡ್ ಬರ್ನ್ ನಿಯಮವನ್ನು ಅಗ್ನಿಶಾಮಕ ಸಿಬ್ಬಂದಿ ಪಾಲಿಸುವ ಮೂಲಕ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಸದ್ಯ ನಿನ್ನೆ ಇದ್ದ ದೊಡ್ಡಮಟ್ಟದ ಬೆಂಕಿ ಕೆನ್ನಾಲಿಗೆ ನಿಯಂತ್ರಣಕ್ಕೆ ಬಂದಿದ್ದು, ತಳಹಂತದಲ್ಲಿ ಬೆಂಕಿ ಉರಿಯುತ್ತಿದೆ. ಇನ್ನು ಎರಡು ಮೂರು ಗಂಟೆಗಳ ಕಾಲ ಬೆಂಕಿ ಉರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಎಂಟು ಜನ ಅಗ್ನಿ ಶಾಮಕ‌ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಇನ್ಸ್ಪೆಕ್ಟರ್​ಗಳಾದ ರೇವಣ್ಣ ಸಿದ್ದಪ್ಪ (36) ಸಂಪತ್ ರಾಜ್ (35) ಇನ್ಸ್ಪೆಕ್ಟರ್ ಸಿದ್ದೇಗೌಡ (34), ಜಿ. ಕೃಷ್ಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೇಬಲ್​ ಸೋಮಶೇಖರ್, ಹೆಡ್ ಕಾನ್‌ಸ್ಟೇಬಲ್, ಫೈರ್ ಮ್ಯಾನ್ ಸೋಮನಾಥ್, ಆನಂದ್, ಕೋಟ್ರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಗ್ನಿ ದುರಂತದಲ್ಲಿ ಪಂಜರದಲ್ಲಿದ್ದ ಪಾರಿವಾಗಳ ಮಾರಣ ಹೋಮವಾಗಿದೆ. ಬೆಂಕಿ ಬಿದ್ದ ಜಾಗದಲ್ಲಿ ಬಿಸಿಯ ಬೇಗೆಗೆ ಪಾರಿವಾಳಗಳು ಬೆಂದು ಹೋಗಿದೆ. ಮಾನವೀಯತೆ ದೃಷ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಪಂಜರದಲ್ಲಿದ್ದ ಪಾರಿವಾಳಗಳನ್ನ ರಕ್ಷಣೆ ಮಾಡಿದ್ದಾರೆ.

Last Updated : Nov 11, 2020, 11:05 AM IST

ABOUT THE AUTHOR

...view details