ಕರ್ನಾಟಕ

karnataka

ETV Bharat / state

ಕೆಮಿಕಲ್ ಫ್ಯಾಕ್ಟರಿ ಅಗ್ನಿ ದುರಂತ: ಮಾಲೀಕರ ವಿರುದ್ಧ ಎಫ್ಐಆರ್ ದಾಖಲು - ಮಾಲೀಕರ ವಿರುದ್ದ ಬ್ಯಾಟರಾಯಪುರ ಸ್ಫೋಟಕ ಕಾಯ್ದೆಯಡಿ ಪ್ರಕರಣ

ಕುವೆಂಪುನಗರದಲ್ಲಿರುವ ಗೋದಾಮು ಸಜ್ಜನ್‌ರಾಜ್ ಹೆಸರಿನಲ್ಲಿದೆ. ಮೈಸೂರು ರಸ್ತೆಯಲ್ಲಿರುವ ಗೋದಾಮಿನಲ್ಲಿ ರಾಸಾಯನಿಕ ದ್ರಾವಣವನ್ನು ಶೇಖರಿಸಲು ಹಾಗೂ ಮಾರಾಟ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ. ಹೀಗಾಗಿ, ಗೋದಾಮಿನ ಮಾಲೀಕ ಸಜ್ಜನರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

chemical-factory-fire-disaster-fir-filed-against-owners
ಕೆಮಿಕಲ್ ಫ್ಯಾಕ್ಟರಿ ಅಗ್ನಿ ದುರಂತ: ಮಾಲೀಕರ ವಿರುದ್ಧ ಎಫ್ಐಆರ್ ದಾಖಲು

By

Published : Nov 10, 2020, 10:00 PM IST

ಬೆಂಗಳೂರು: ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಅಗ್ನಿ ದುರಂತ ಅವಘಡ ಹಿನ್ನೆಲೆ ರೇಖಾ‌‌ ಕೆಮಿಕಲ್‌ ಇಂಡಸ್ಟ್ರಿ ಮಾಲೀಕರ ವಿರುದ್ಧ ಬ್ಯಾಟರಾಯಪುರ ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗೋದಾಮಿನ‌ ಪಕ್ಕದಲ್ಲಿರುವ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಮಾಲೀಕ ಆಯಾಜ್ ಖಾನ್, ಅಗ್ನಿ ಅವಘಡದಿಂದ 45 ಲಕ್ಷ ರೂ. ನಷ್ಟವಾಗಿದೆ ಎಂದು ನೀಡಿದ ದೂರಿನ್ವನಯ ಸಜ್ಜನ್ ರಾಜ್ ಹಾಗೂ ಕಮಲಾ ದಂಪತಿ ವಿರುದ್ಧ‌ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೊಮ್ಮಸಂದ್ರದಲ್ಲಿ ಕಮಲಾ ಸಜ್ಜನರಾಜ್ ಮಾಲೀಕತ್ವದ ರೇಖಾ ಕೆಮಿಕಲ್ ಇಂಡಸ್ಟ್ರೀಸ್ ಮತ್ತು ಕೆಮಿಕಲ್ ಕಾರ್ಪೋರೇಷನ್’ ಕಾರ್ಖಾನೆ ಇದೆ.

ಕುವೆಂಪು ನಗರದಲ್ಲಿರುವ ಗೋದಾಮು ಸಜ್ಜನ್‌ರಾಜ್ ಹೆಸರಿನಲ್ಲಿದೆ. ಮೈಸೂರು ರಸ್ತೆಯಲ್ಲಿರುವ ಗೋದಾಮಿನಲ್ಲಿ ರಾಸಾಯನಿಕ ದ್ರಾವಣವನ್ನು ಶೇಖರಿಸಲು ಹಾಗೂ ಮಾರಾಟ ಮಾಡಲು ಯಾವುದೇ ರೀತಿಯ ಅನುಮತಿ ಇಲ್ಲ. ಹೀಗಾಗಿ, ಗೋದಾಮಿನ ಮಾಲೀಕ ಸಜ್ಜನರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೊಸಗುಡ್ಡದಹಳ್ಳಿಯ ಕುವೆಂಪುನಗರದಲ್ಲಿ 20 ವರ್ಷಗಳಿಂದ ರೇಖಾ ಕೆಮಿಕಲ್ ಫ್ಯಾಕ್ಟರಿಯ ಗೋದಾಮು ಇದೆ. ಕುಂಬಳಗೋಡು ಬಳಿಯ ಫ್ಯಾಕ್ಟರಿಯೊಂದರಿಂದ ಸ್ಯಾನಿಟೈಸರ್ ತಯಾರಿಕೆಗೆ ಹಾಗೂ ಇನ್ನಿತರ ದ್ರಾವಣ ತಯಾರಿಸಲು ಬಳಸುವ ಕಚ್ಚಾ ರಾಸಾಯನಿಕಗಳನ್ನು ಈ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು.

ಮಂಗಳವಾರ ಬೆಳಗ್ಗೆ 10.30ರಲ್ಲಿ ಮೂವರು ಕಾರ್ಮಿಕರು ಲಾರಿಯಲ್ಲಿದ್ದ ಕೆಮಿಕಲ್ ಬ್ಯಾರೆಲ್‌ಗಳನ್ನು ಇಳಿಸುತ್ತಿದ್ದರು. 11.15ರಲ್ಲಿ ಗೋದಾಮಿನ ಗೇಟ್ ಮುಂಭಾಗದಲ್ಲಿ ಬ್ಯಾರೆಲ್‌ನಲ್ಲಿದ್ದ ಕೆಮಿಕಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಹೆದರಿದ ಕಾರ್ಮಿಕರು ಕೂಡಲೇ ಅಲ್ಲಿಂದ ಓಡಿಹೋಗಿದ್ದರು. ನಂತರ ಕೆಲವೇ ನಿಮಿಷಗಳಲ್ಲಿ ಬೆಂಕಿ ಗೋದಾಮಿಗೂ ವ್ಯಾಪಿಸಿದೆ. ಬೆಂಕಿ ತಗುಲಿ ಬ್ಯಾರೆಲ್‌ಗಳು 30 ಅಡಿ ಎತ್ತರಕ್ಕೆ ಚಿಮ್ಮಿ ಸಿಡಿದಿವೆ. ಸ್ಥಳೀಯರು ಅಗ್ನಿಶಾಮಕ ದಳದ ಸಹಾಯವಾಣಿಗೆ ದೂರು ಮುಟ್ಟಿಸಿದ್ದರು. ಬಳಿಕ ಗೋದಾಮಿನ ಸುತ್ತಮುತ್ತಲಿನ ಸಣ್ಣಪುಟ್ಟ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಹೊರಗೆ ಕಳುಹಿಸಲಾಗಿದೆ. ರಸ್ತೆಯಲ್ಲಿ ನೀರು ಸಿಂಪಡಿಸಿ ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗೋದಾಮಿನಲ್ಲಿ 1 ಸಾವಿರಕ್ಕೂ ಹೆಚ್ಚು ಬ್ಯಾರೆಲ್‌ಗಳಿದ್ದವು ಎಂಬುದು ತಿಳಿದುಬಂದಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಬೆಂಕಿಯ ಕೆನ್ನಾಲಿಗೆ ಗೋದಾಮಿನ ಮುಂಭಾಗದ ರಸ್ತೆ ಹಾಗೂ ಹಿಂಭಾಗದ ಮನೆಗಳಿಗೂ ವ್ಯಾಪಿಸಿತ್ತು. ಕೂಡಲೇ ನಿವಾಸಿಗಳು ಮನೆ ಖಾಲಿ ಮಾಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬೆಳಗ್ಗೆ 11.30ರಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿವರೆಗೆ ನಂದಿಸುವ ಕಾರ್ಯಾಚರಣೆ ಮುಂದುವರಿದಿತ್ತು. ಉತ್ತರ ಭಾರತ ಮೂಲದ ಕಾರ್ಮಿಕ ಬಿಜುಸಿಂಗ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರೇವಣಸಿದ್ಧಪ್ಪ, ಸಂಪತ್‌ರಾಜ್, ಸಿದ್ದೇಗೌಡ ಗಾಯಗೊಂಡವರು. ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯಿಂದಾಗಿ ಗೋದಾಮಿನಲ್ಲಿರುವ ಎರಡು ಕಟ್ಟಡಗಳು, ಪಕ್ಕದ‌ ಒಂದು ಕಟ್ಟಡ ಪೂರ್ಣ ನಾಶವಾಗಿದೆ ಜೊತೆಗೆ ಏಳು ವಾಹನಗಳು, ಎರಡು ಬೀದಿ ಕಂಬಗಳು ಹಾನಿಯಾಗಿದ್ದು ಸುಮಾರು 2-3 ಕೋಟಿ ರೂಪಾಯಿ ನಷ್ಟವಾಗಿದೆ ಎಂದು‌ ಪೊಲೀಸರು ಅಂದಾಜಿಸಿದ್ದಾರೆ.

ABOUT THE AUTHOR

...view details