ಕರ್ನಾಟಕ

karnataka

ETV Bharat / state

ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ: ಸಿಟಿ ರೌಂಡ್ಸ್ ಮಾಡ್ತದೆ ಲೇಡಿ ಪೊಲೀಸರ ತಂಡ.. - 15 ಜನ ಸಬ್ ಇನ್​​ಸ್ಪೆಕ್ಟರ್ ತಂಡ

ಬೆಂಗಳೂರು ಪೊಲೀಸ್ ಇಲಾಖೆಯ 15 ಜನ ಸಬ್ ಇನ್​​ಸ್ಪೆಕ್ಟರ್ ತಂಡ ಮೋಟಾರ್ ಸೈಕಲ್​​​ಗಳನ್ನ ಸವಾರಿ ಮಾಡುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

Cheetah Force iis ready
ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ

By

Published : Jan 26, 2020, 10:38 AM IST

Updated : Jan 26, 2020, 10:50 AM IST

ಬೆಂಗಳೂರು: ವಿ ಫಾರ್ ವುಮೆನ್, ನಾವು ಯಾವುದಕ್ಕೂ ಕಮ್ಮಿ ಇಲ್ಲ ಅಂತಾ ಬೆಂಗಳೂರು ಪೊಲೀಸ್ ಇಲಾಖೆಯಿಂದ 15 ಜನ ಸಬ್ ಇನ್​​ಸ್ಪೆಕ್ಟರ್‌ಗಳ ತಂಡ ಮೋಟಾರ್ ಸೈಕಲ್​​​ಗಳನ್ನ ಸವಾರಿ ಮಾಡುವ ಮೂಲಕ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಮಹಿಳಾ ರಕ್ಷಣೆಗೆ ಸಜ್ಜಾಗಿದೆ ಚೀತಾ ಪಡೆ

ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ರಾಯಲ್ ಎನ್‌ಫೀಲ್ಡ್ ಬೈಕ್, ಪೊಲೀಸ್ ಇಲಾಖೆಯ ಚೀತಾ ಬೈಕ್​​​ಗಳನ್ನ ರೈಡ್ ಮಾಡ್ತ ಪುರುಷ ಸಿಬ್ಬಂದಿಯಷ್ಟೇ ತಾವೂ ಕೂಡ ಸಮಾನರು ಅಂತಾ ತೋರಿಸಿದ್ದಾರೆ. ಬೈಕನಲ್ಲೇ ‌ಸ್ಟಂಟ್ ಮಾಡ್ತಾ ಇಡೀ ಸಿಲಿಕಾನ್ ಸಿಟಿಯಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸಿಟಿ ರೌಂಡ್ಸ್ ಮಾಡ್ತದೆ ಲೇಡಿ ಪೊಲೀಸರ ತಂಡ

15 ಜನ ಸಬ್ ಇನ್​​ಸ್ಪೆಕ್ಟರ್‌ಗಳ ಮಹಿಳೆಯರ ತಂಡ, ಮಕ್ಕಳ ಸುರಕ್ಷಿತ ನಗರ ಮಾಡುವ ಧ್ಯೇಯ ಹೊಂದಿದೆ. ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ. ನಾವು ಪುರುಷರಷ್ಟೇ ಸಮಾನರು, ಹಾಗೆ ನಾವು ರಾತ್ರಿ ಪಾಳಿ ಮಾಡುವಾಗ ಬೈಕಲ್ಲೇ ಗಸ್ತು ತಿರುಗುತ್ತೀವಿ ಎಂದಿದ್ದಾರೆ.

Last Updated : Jan 26, 2020, 10:50 AM IST

ABOUT THE AUTHOR

...view details