ಕರ್ನಾಟಕ

karnataka

ETV Bharat / state

ಅಪ್ಪ ಎಂಎಲ್​ಎ, ಅಮ್ಮ ವೈದ್ಯೆ ಅಂತ ರೈಲು ಬಿಟ್ಟ: ಯುವಕನ ನಂಬಿ ಅಪಾರ್ಟ್​ಮೆಂಟ್​ಗೆ ಹೋದವಳ ಮೇಲೆ ಅತ್ಯಾಚಾರ - ಹಲಸೂರು ಪೊಲೀಸ್ ಠಾಣೆ

ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಯುವಕ ಅಪಾರ್ಟ್​ಮೆಂಟ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಆರೋಪ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅತ್ಯಾಚಾರ

By

Published : Nov 12, 2019, 2:56 PM IST

ಬೆಂಗಳೂರು: ಸಿಲಿಕಾನ್ ಸಿಟಿಗೆ ಉದ್ಯೋಗ ಅರಸಿ ಬಂದ ವೇಳೆ ಯುವತಿಗೆ ಪರಿಚಯವಾಗಿದ್ದ ಯುವಕನೋರ್ವ ಆಕೆ ಮೇಲೆ ಅತ್ಯಾಚಾರಕ್ಕೆ ಎಸಗಿರುವ ಆರೋಪ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಾನು ದೊಡ್ಡ ಬ್ಯುಸಿನೆಸ್​ ​ಮ್ಯಾನ್​, ನನ್ನ ಅಪ್ಪ ಎಂಎಲ್ಎ, ಅಮ್ಮ ಡಾಕ್ಟರ್ ಅಂತೇಳಿ ಯುವತಿ ಎದುರು ಬಣ್ಣದ ಮಾತುಗಳನ್ನಾಡಿ ಆಕೆಯನ್ನು ಪರಿಚಯ ಮಾಡಿಕೊಂಡು ಬಳಿಕ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ದೂರಿನ ಪ್ರತಿ

ಸಂತ್ರಸ್ತೆಗೆ ಪರಿಚಯವಾದ ಕಾರ್ತಿಕ್ ರೆಡ್ಡಿ ಮೊದಲು ಸ್ನೇಹಿತನಾಗಿ ಇದ್ದು, ಆಕೆಯೊಂದಿಗೆ ಸಲುಗೆ ಬೆಳೆಸಿದ್ದನಂತೆ. ನಂತರ ನಂತರ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಮಾತುಕತೆ ನಡೆಸೋದಕ್ಕೆ‌ ಕರೆಸಿದ್ದ. ಅಲ್ಲದೆ ಯುವತಿಯನ್ನ ಸ್ಕೋಡಾ ಕಾರ್​ನಲ್ಲಿ ಸಿಟಿ ರೌಂಡ್ಸ್ ಹಾಕಿಸಿ ಮಾರತಹಳ್ಳಿ ಕಾಡಬೀಸನಹಳ್ಳಿಯಲ್ಲಿರುವ ಖಾಸಗಿ ಅಪಾರ್ಟ್ಮೆಂಟ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಸಂತ್ರಸ್ತೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗನ್ ಇದೆ ಶೂಟ್ ಮಾಡಿಬಿಡ್ತಿನಿ ಎಂದು ಬೆದರಿಸಿ‌ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ್ದಾನೆಂದು ಸದ್ಯ ನೊಂದ ಯುವತಿ ನೀಡಿದ ದೂರು ಆಧರಿಸಿ, ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ABOUT THE AUTHOR

...view details