ಬೆಂಗಳೂರು: ಸಾಮಾಜಿಕ ಜಾಲತಾಣದಿಂದಾಗಿ ಅನೇಕ ಜನರು ಮೋಸ ಹೋಗಿರುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಅಂತಹದ್ದೇ ಘಟನೆಯೊಂದು ನಗರದಲ್ಲಿ ಮತ್ತೆ ನಡೆದಿದೆ.
ರಾಜೇಶ್ ಎಂಬುವರು ಒಎಲ್ಎಕ್ಸ್ನಲ್ಲಿ ತಮ್ಮ ಮಹಿಂದ್ರಾ ವೆರಿಟೋ ಕಾರನ್ನು ಮಾರಾಟ ಮಾಡಲು ಜಾಹೀರಾತು ಪ್ರಕಟಿಸಿದ್ದರು. ಈ ವೇಳೆ ಸೋಮಶೇಖರ್ ಎಂಬಾತ 5,10,000 ರೂ.ಗೆ ಖರೀದಿಸುವುದಾಗಿ ಮುಂದೆ ಬಂದಿದ್ದ. ಆತ 10,000 ರೂ. ನಗದು ನೀಡಿದ್ದು, ಬಾಕಿ ಉಳಿದ ಹಣವನ್ನು ಚೆಕ್ ಮೂಲಕ ನೀಡಿರುವುದಾಗಿ ಹೇಳಿದ್ದಾನೆ. ಸೋಮಶೇಖರ್ನ ಮಾತು ನಂಬಿ ರಾಜೇಶ್ ಕಾರು ಮಾರಾಟ ಮಾಡಿದ್ದರು. ಆದರೆ ಚೆಕ್ ಡ್ರಾ ಮಾಡಲು ಹೋದಾಗ ಆತನ ಅಕೌಂಟ್ನಲ್ಲಿ ಹಣವಿಲ್ಲ ಎಂಬುದು ತಿಳಿದಿದೆ.