ಬೆಂಗಳೂರು: ಜೀವನ್ ಸಾಥಿ ಡಾಟ್ ಕಾಮ್ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ಮದುವೆ ಆಗುವುದಾಗಿ ನಂಬಿಸಿ ಮಹಿಳಾ ಟೆಕ್ಕಿಗೆ 10 ಲಕ್ಷ ರೂ. ವಂಚಿಸಿದ್ದಾನೆ.
ಜೀವನ್ ಸಾಥಿ ಡಾಟ್ ಕಾಮ್ನಲ್ಲಿ ಸ್ನೇಹ: ಮದುವೆ ಆಗೋದಾಗಿ ನಂಬಿಸಿ ಟೆಕ್ಕಿಗೆ 10 ಲಕ್ಷ ಪಂಗನಾಮ! - ಕಾಡುಗೋಡಿ ಪೊಲೀಸ್ ಠಾಣೆ
ಜೀವನ್ ಸಾಥಿ ಡಾಟ್ ಕಾಮ್ನಲ್ಲಿ ಮದುವೆ ಆಗುವುದಾಗಿ ನಂಬಿಸಿ ಮಹಿಳಾ ಟೆಕ್ಕಿಗೆ, ವ್ಯಕ್ತಿಯೊಬ್ಬ 10 ಲಕ್ಷ ರೂಪಾಯಿ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
![ಜೀವನ್ ಸಾಥಿ ಡಾಟ್ ಕಾಮ್ನಲ್ಲಿ ಸ್ನೇಹ: ಮದುವೆ ಆಗೋದಾಗಿ ನಂಬಿಸಿ ಟೆಕ್ಕಿಗೆ 10 ಲಕ್ಷ ಪಂಗನಾಮ! cheating from young man to Tekki](https://etvbharatimages.akamaized.net/etvbharat/prod-images/768-512-11329044-thumbnail-3x2-vish.jpg)
ಕಳೆದ ಫೆಬ್ರವರಿಯಲ್ಲಿ ತನ್ನ ಮದುವೆ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ ಯುವತಿ ಅಕೌಂಟ್ಗೆ ಪ್ರಪೋಸಲ್ ಕಳಿಸಿದ್ದ ಮಧ್ಯಪ್ರದೇಶ ಮೂಲದ ಯುವಕ ಅದಿಕರ್ಶ್ ಶರ್ಮಾ ಎಂಬಾತನಿಂದ ವಂಚನೆಯಾಗಿದೆ ಎಂದು ದೂರು ನೀಡಲಾಗಿದೆ. ಬೆಂಗಳೂರಿನಲ್ಲಿ ಬಿಸಿನೆಸ್ ಮಾಡುತ್ತೇನೆ. ಅಮೌಂಟ್ ಶಾರ್ಟೇಜ್ ಇದೆ ಎಂದು ಯುವತಿ ಬಳಿ ಯುವಕ ಹೇಳಿ ನಂಬಿಕೆ ಬರುವಂತೆ ಮಾಡಿದ್ದ.
ಮದುವೆಯಾಗುವ ಹುಡುಗ ಅಂತ ಟೆಕ್ಕಿ ಬ್ಯಾಂಕ್ನಿಂದ 10 ಲಕ್ಷ ಲೋನ್ ಪಡೆದು ಹಣ ಕೊಟ್ಟಿದ್ದಾಳೆ. ಹಣ ಪಡೆಯುತ್ತಿದ್ದಂತೆ ಮೊಬೈಲ್ ಸ್ವಿಚ್ಢ್ ಆಫ್ ಮಾಡಿಕೊಂಡು ಆರೋಪಿ ಎಸ್ಕೇಪ್ ಆಗಿದ್ದಾನೆ. ಮೋಸ ಹೋದ ಮಹಿಳಾ ಟೆಕ್ಕಿ ಈಗ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.