ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ 6 ಕಿ.ಮೀ ಕಾರು ಹಿಂಬಾಲಿಸಿ ​ದರೋಡೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - money robbery

ಉದ್ಯಮಿಯೊಬ್ಬರ ಕಾರನ್ನು ಹಿಂಬಾಲಿಸಿ, ಸಮಯ ನೋಡಿಕೊಂಡು ಕಾರಿನ ಗಾಜು ಒಡೆದು ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ದರೋಡೆ ಮಾಡಲಾಗಿದೆ.

chased-car-for-money-robbery-in-bangalore
ದರೋಡೆ

By

Published : Nov 19, 2020, 3:19 AM IST

Updated : Nov 19, 2020, 7:03 AM IST

ಬೆಂಗಳೂರು: ಉದ್ಯಮಿಯ ಕಾರನ್ನು ಹಿಂಬಾಲಿಸಿದ ಡರೋಡೆಕೋರರು ಸಮಯ ನೋಡಿಕೊಂಡು ಕಾರಿನ ಗಾಜು ಒಡೆದು ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ನವೆಂಬರ್ 11ರಂದು ಕೇರಳ ಮೂಲದ ಉದ್ಯಮಿ ಸಮೀಲ್ ಎಂಬುವರು ಬೆಂಗಳೂರಿನ ಕಲ್ಯಾಣನಗರದಲ್ಲಿರುವ ಐಸಿಐಸಿಐ ಬ್ಯಾಂಕ್​ನಲ್ಲಿ ಹಣ ಜಮಾ ಮಾಡಲು ಹೋಗಿದ್ದರು. ಬ್ಯಾಂಕ್ ಅವಧಿ ಮುಗಿದಿದ್ದರಿಂದ ಸಂಜೆ ಹಣವನ್ನು ವಾಪಸ್ ಕಾರಿನಲ್ಲಿಟ್ಟುಕೊಂಡು ಕಮ್ಮನಹಳ್ಳಿ ಕಡೆ ಬರುತ್ತಿದ್ದರು.‌

​ದರೋಡೆ ಪ್ರಕರಣ

ಮೂರು ಬೈಕ್​ಗಳಲ್ಲಿ ಆರು ಮಂದಿ ಡರೋಡೆಕೋರರು ಉದ್ಯಮಿ ಕಾರನ್ನು ಆರು ಕಿಲೋಮೀಟರ್​​ವರೆಗೆ ಹಿಂಬಾಲಿಸಿದ್ದಾರೆ.‌ ಕಮ್ಮನಹಳ್ಳಿಯ ರೆಸ್ಟೋರೆಂಟ್‌ ಬಳಿ ಊಟಕ್ಕಾಗಿ ಸಮೀಲ್ ಕಾರು ನಿಲ್ಲಿಸಿದ್ದಾರೆ. ಆಗ ದರೋಡೆಕೋರರು ಕಾರಿನಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಗಾಜು ಒಡೆದು ಬ್ಯಾಗ್​ನಲ್ಲಿದ್ದ ಆರು ಲಕ್ಷ ಮೌಲ್ಯದ ರೋಲೆಕ್ಸ್ ವಾಚ್, 2.75 ಲಕ್ಷ ರೂ. ನಗದು, ಎಟಿಎಂ ಕಾರ್ಡ್, ಬ್ಯಾಂಕ್​ ಪಾಸ್​​ಬುಕ್ ತೆಗೆದುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉದ್ಯಮಿ‌ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.

Last Updated : Nov 19, 2020, 7:03 AM IST

ABOUT THE AUTHOR

...view details