ಬೆಂಗಳೂರು:ಮುಂಬರುವ ಶನಿವಾರ ಹಾಗೂ ಭಾನುವಾರದಂದು ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ.
ಹಸಿರು ಮಾರ್ಗದ ಆರ್ವಿ ರಸ್ತೆಯಿಂದ-ಯಲಚೇನಹಳ್ಳಿವರೆಗೆ ಶನಿವಾರ ಹಾಗೂ ಭಾನುವಾರದಂದು ರಾತ್ರಿ 8 ಗಂಟೆಗೆ ಮೆಟ್ರೋ ಕಾರ್ಯಾಚರಣೆ ಸ್ಥಗಿತವಾಗಲಿದೆ.
*ಯಲಚೇನಹಳ್ಳಿ ನಿಲ್ದಾಣದಿಂದ ನಾಗಸಂದ್ರದವರೆಗೆ ಹೊರಡುವ ಕೊನೆಯ ರೈಲು ಯಲಚೇನಹಳ್ಳಿ ನಿಲ್ದಾಣದಿಂದ 8 ಗಂಟೆಗೆ ಹೊರಡಲಿದೆ.
*ನಾಗಸಂದ್ರ ನಿಲ್ದಾಣದಿಂದ ಕೊನೆಯ ರೈಲು 6:56 ಗಂಟೆಗೆ ಹೊರಡಲಿದೆ.
*ಆರ್ವಿ ರಸ್ತೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ಸೇವೆ ಎಂದಿನಂತೆ 9 ಗಂಟೆಯವರೆಗೆ ಲಭ್ಯವಿದೆ.
*ಯಲಚೇನಹಳ್ಳಿ-ನಾಗಸಂದ್ರ ನಿಲ್ದಾಣಗಳ ನಡುವೆ ದಿನಾಂಕ 20-21ರಂದು ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆ ಆರಂಭವಾಗಲಿದೆ.
*ನೇರಳೆ ಮಾರ್ಗದಲ್ಲಿ ಎಂದಿನಂತೆ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೋ ಸಂಚಾರ ಇರಲಿದೆ.
*ಮೆಜೆಸ್ಟಿಕ್ಗೆ ಪ್ರಯಾಣ ಮಾಡುವವರು, ಬೈಯಪ್ಪನಹಳ್ಳಿಯಿಂದ ಸಂಜೆ 6:55ಕ್ಕೆ ಹಾಗೂ ಮೈಸೂರು ರಸ್ತೆ ನಿಲ್ದಾಣದಿಂದ 7 ಗಂಟೆಗೆ ಹೊರಡುವ ರೈಲಿನಲ್ಲಿ ಪ್ರಯಾಣಿಸಲು ಸೂಚಿಸಲಾಗಿದೆ. ಇಲ್ಲವಾದಲ್ಲಿ ಆರ್ವಿ ರಸ್ತೆ ನಿಲ್ದಾಣದವರೆಗೆ ಮಾತ್ರ ಪ್ರಯಾಣಿಸಬಹುದಾಗಿದೆ.
ಈ ಬದಲಾವಣೆ ಹಂತ-2ರ ಯಲಚೇನಹಳ್ಳಿಯಿಂದ ಅಂಜನಪುರ ಮೆಟ್ರೋ ರೈಲು ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆಗೆ ಪೂರ್ವ ಸಿದ್ಧತೆಗಾಗಿ ಸಿಸ್ಟಂ ಮತ್ತು ರೈಲುಗಳ ಪರೀಕ್ಷೆ ಮಾಡಬೇಕಿದೆ. ಹೀಗಾಗಿ ಹಸಿರು ಮಾರ್ಗದಲ್ಲಿ ಒಂದು ಗಂಟೆ ಮೊದಲೇ ರೈಲು ಕಾರ್ಯಾಚರಣೆ ಸ್ಥಗಿತ ಮಾಡಲಾಗುತ್ತಿದೆ ಎಂದು ಬಿಎಮ್ಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ತಿಳಿಸಿದ್ದಾರೆ.