ಕರ್ನಾಟಕ

karnataka

ETV Bharat / state

ಇಂದಿನಿಂದ 1ರಿಂದ 6ನೇ ತರಗತಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ... - ಸಚಿವ ಎಸ್ ಸುರೇಶ್ ಕುಮಾರ್ ಸುದ್ದಿಗೋಷ್ಠಿ ಸುದ್ದಿ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ರಾಜ್ಯದಲ್ಲಿ ಕೊರೋನಾ ವೈರಸನ್ನು ತಡೆಗಟ್ಟುವ ಹಾಗೂ ನಿಯಂತ್ರಣಕ್ಕೆ ತರುವ ಉದ್ದೇಶದಿಂದ 1 ರಿಂದ 6 ನೇ ತರಗತಿವರೆಗೆ ಬೇಸಿಗೆ ರಜೆ ಹಾಗೂ 7 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

S Suresh kumar
ಎಸ್ ಸುರೇಶ್ ಕುಮಾರ್

By

Published : Mar 12, 2020, 7:56 PM IST

Updated : Mar 13, 2020, 1:57 AM IST

ಬೆಂಗಳೂರು : 1 ರಿಂದ 6 ನೇ ತರಗತಿವರೆಗೆ ಬೇಸಿಗೆ ರಜೆ ಹಾಗೂ 7 ರಿಂದ 10 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ದತಾ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಎರಡು ನಿರ್ಣಯಗಳನ್ನು ನಾವು ತೆಗೆದುಕೊಂಡಿದ್ದೇವೆ. ಮಾರ್ಚ್ 9 ರಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಪೂರ್ವ ಪ್ರಾಥಮಿಕ ಎಲ್​ಕೆಜಿ, ಯುಕೆಜಿಗೆ ರಜೆ ಘೋಷಿಸಿದ್ದೆವು. ನಂತರ ಮಾರ್ಚ್ 10 ರಂದು 1 ರಿಂದ 5 ನೇ ತರಗತಿಯವರಗೆ ರಜೆ ಘೋಷಿಸಲಾಗಿತ್ತು.

ಎಸ್. ಸುರೇಶ್ ಕುಮಾರ್ ಸುದ್ದಿಗೋಷ್ಠಿ

ನಾಳೆಯಿಂದ ಬೇಸಿಗೆ ರಜೆ...

ಮುನ್ನೆಚ್ಚರಿಕಾ ಕ್ರಮವಾಗಿ 1 ರಿಂದ 6 ನೇ ತರಗತಿಯವರೆಗೆ ನಾಳೆಯಿಂದ ಬೇಸಿಗೆ ರಜೆ ಘೋಷಿಸಲಾಗಿದೆ. ಒಂದರಿಂದ ಆರನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ 2019-20 ನೇ ಸಾಲಿನಲ್ಲಿ ನಡೆಸಿದ FA 1, FA 2, FA3, FA 4 ಮತ್ತು SA1 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತದೆ. ಮತ್ತು ಮುಂದಿನ ತರಗತಿಗಳಿಗೆ ಬಡ್ತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇನ್ನು 7 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಟಡಿ ಲೀವ್ ( ಪರೀಕ್ಷಾ ಪೂರ್ವ ಸಿದ್ಧತಾ ರಜೆ) ನಾಳೆಯಿಂದ ನೀಡಲಾಗುತ್ತಿದೆ. 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 23 ರರೊಳಗೆ ಪರೀಕ್ಷೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ ಬೇಸಿಗೆ ರಜೆ ಘೋಷಿಸಲು ಸೂಚನೆ ನೀಡಲಾಗಿದೆ. ಇದು ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದರು.

ಮಾಸ್ಕ್ ಧರಿಸಬಹುದು...

ಇನ್ನು ಎಸ್​ಎಸ್ಎಲ್​ಸಿ ಪರೀಕ್ಷೆ ಈಗಾಗಲೇ ನಿಗದಿಯಾಗಿರುವಂತೆ ನಡೆಯಲಿದೆ. ಹತ್ತನೇ ತರಗತಿ ವಿದ್ಯಾರ್ಥಿಗಳು ಅಗತ್ಯಬಿದ್ದರೆ ಮಾಸ್ಕ್ ಹಾಕಿಕೊಂಡೇ ಪರೀಕ್ಷೆ ಬರೆಯಬಹುದು ಎಂದ ಸಚಿವರು, ಉಳಿದ ಜಿಲ್ಲೆಗಳಲ್ಲಿ ಯಥಾವತ್ತಾಗಿ ಶಾಲೆಗಳು ಮುಂದುವರೆಯುತ್ತದೆ. ಆದರೆ, ಉಳಿದ ಜಿಲ್ಲೆಗಳಲ್ಲೂ 1 ರಿಂದ 5ನೇ ತರಗತಿಯವರಿಗೆ ಮಾರ್ಚ್ 16 ರರೊಳಗೆ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. 7 ರಿಂದ 9 ನೇ ತರಗತಿಯವರಿಗೆ 23 ನೇ ತಾರಿಖಿನ ಒಳಗಾಗಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದರು.

ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Last Updated : Mar 13, 2020, 1:57 AM IST

For All Latest Updates

ABOUT THE AUTHOR

...view details