ಕರ್ನಾಟಕ

karnataka

ETV Bharat / state

ನೀಟ್ ಪರೀಕ್ಷೆಗಾಗಿ ಪ್ರಧಾನಿ ಮೋದಿ ರೋಡ್ ಶೋನಲ್ಲಿ ಮತ್ತೆ ಬದಲಾವಣೆ

ನಾಳೆ ಮತ್ತು ನಾಡಿದ್ದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿಯವರ ರೋಡ್​ ಶೋನಲ್ಲಿ ಬದಲಾವಣೆ ಮಾಡಲಾಗಿದೆ.

bjp
ನರೇಂದ್ರ ಮೋದಿ ರೋಡ್​ ಶೋ

By

Published : May 5, 2023, 9:31 AM IST

ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋನಲ್ಲಿ ಮೂರನೇ ಬಾರಿ ಬದಲಾವಣೆ ಮಾಡಲಾಗಿದೆ. ನೀಟ್ ಪರೀಕ್ಷೆಗೆ ತೆರಳುವ ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ರೋಡ್ ಶೋ ಮಾರ್ಗ ಮತ್ತು ಸಮಯವನ್ನು ಮರು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಅನ್ನು ಶನಿವಾರಕ್ಕೆ ನಿಗದಿಪಡಿಸಲಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರ ನಡೆಯಲಿದೆ. ಅಂದರೆ ಶನಿವಾರ ನಡೆಯಬೇಕಿದ್ದ 10 ಕಿಲೋಮೀಟರ್ ರೋಡ್ ಶೋ ಭಾನುವಾರ ಬೆಳಗ್ಗೆ ನಡೆಯಲಿದ್ದು, ಭಾನುವಾರ ನಡೆಯಬೇಕಿದ್ದ 26.5 ಕಿಲೋಮೀಟರ್ ರೋಡ್ ಶೋ ಕೆಲವು ಮಾರ್ಪಾಡಿನೊಂದಿಗೆ ಶನಿವಾರವೇ ನಡೆಯಲಿದೆ.

ಹೊಸ ಯೋಜನೆ ಪ್ರಕಾರ, ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ಮೊದಲ ರೋಡ್ ಶೋ ನಡೆಯಲಿದ್ದು, ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂನಿಂದ ಆರಂಭಗೊಂಡು ಮಲ್ಲೇಶ್ವರದ ಸರ್ಕಲ್ ಮಾರಮ್ಮ ಟೆಂಪಲ್​ವರೆಗೆ ನಡೆಯುತ್ತದೆ. ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ಎರಡನೇ ದಿನದ ರೋಡ್ ಶೋ ನಡೆಯಲಿದ್ದು, ಸುರಂಜನ್ ದಾಸ್ ಸರ್ಕಲ್​ನಿಂದ ಟ್ರಿನಿಟಿ ಸರ್ಕಲ್​ವರೆಗೆ ನಡೆಯಲಿದೆ. ಭಾನುವಾರ ನಡೆಯುವ ರೋಡ್ ಶೋನಲ್ಲಿ 4 ಕಿ.ಮೀ‌. ಕಡಿತ ಮಾಡಲಾಗಿದೆ‌. ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ರೋಡ್ ಶೋ ಸಾಗುವ ಕ್ಷೇತ್ರಗಳು:

  • ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ
  • ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ
  • ಜಯನಗರ ವಿಧಾನ ಸಭಾ ಕ್ಷೇತ್ರ
  • ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರ
  • ಬಸವಣಗುಡಿ ವಿಧಾನ ಸಭಾ ಕ್ಷೇತ್ರ
  • ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರ
  • ಚಾಮರಾಜ ಪೇಟೆ ವಿಧಾನ ಸಭಾ
  • ಗಾಂಧಿ ನಗರ ವಿಧಾನ ಸಭಾ ಕ್ಷೇತ್ರ
  • ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರ
  • ವಿಜಯ ನಗರ ವಿಧಾನ ಸಭಾ ಕ್ಷೇತ್ರ
  • ಗೋವಿಂದ ರಾಜ ನಗರ ವಿಧಾನ ಸಭಾ ಕ್ಷೇತ್ರ
  • ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರ
  • ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ

ಭಾನುವಾರದ ರೋಡ್ ಶೋ ಸಾಗುವ ಕ್ಷೇತ್ರಗಳು:

  • ಮಹಾದೇವ ಪುರ ವಿಧಾನ ಸಭಾ ಕ್ಷೇತ್ರ
  • ಕೆ ಆರ್ ಪುರ ವಿಧಾನ ಸಭಾ ಕ್ಷೇತ್ರ
  • ಸಿವಿ ರಾಮನ್ ವಿಧಾನ ಸಭಾ ಕ್ಷೇತ್ರ
  • ಶಿವಾಜಿ ನಗರ ವಿಧಾನ ಸಭಾ ಕ್ಷೇತ್ರ
  • ಶಾಂತಿ ನಗರ ವಿಧಾನ ಸಭಾ ಕ್ಷೇತ್ರ

ಈ ಮೊದಲು ಶನಿವಾರ ಬೆಳಗ್ಗೆ ಮತ್ತು ಭಾನುವಾರ ಸಂಜೆ ರೋಡ್ ಶೋ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ವೀಕೆಂಡ್​ನ ಎರಡೂ ದಿನ ರೋಡ್ ಶೋ ನಡೆಸಿದಲ್ಲಿ ಸಂಚಾರ ದಟ್ಟಣೆಯು ಎರಡು ದಿನವೂ ಆಗಲಿದೆ ಎನ್ನುವ ಕಾರಣಕ್ಕೆ ಒಂದು ದಿನಕ್ಕೆ ರೋಡ್ ಶೋ ಪ್ಲಾನ್ ಬದಲಾವಣೆ ಮಾಡಿಕೊಳ್ಳಲಾಯಿತು. ಆದರೆ ಪ್ರತಿದಿನ ಸಂಜೆ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು ಸಂಜೆ ರೋಡ್ ಶೋ ರದ್ದಾಗುವ ಭೀತಿಯಿಂದ ಮತ್ತೆ ಎರಡು ದಿನಕ್ಕೆ ರೋಡ್ ಶೋ ಸಮಯವನ್ನು ಮರು ನಿಗದಿಪಡಿಸಲಾಯಿತು.

ಅದರಂತೆ, ಶನಿವಾರ ಬೆಳಗ್ಗೆ ಮತ್ತು ಭಾನುವಾರ ಬೆಳಗ್ಗೆ ರೋಡ್ ಶೋಗೆ ನಿರ್ಧರಿಸಲಾಯಿತು. ಭಾನುವಾರ ಸುದೀರ್ಘ 26.5 ಕಿಲೋಮೀಟರ್ ರೋಡ್ ಶೋಗೆ ಪ್ಲಾನ್ ಮಾಡಲಾಗಿತ್ತು. ಆದರೆ ಭಾನುವಾರ ನೀಟ್ ಪರೀಕ್ಷೆ ಇದ್ದು ರೋಡ್ ಶೋ ಕಾರಣದಿಂದ ಬದಲಿ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಲು ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ರೋಡ್ ಶೋ ವ್ಯವಸ್ಥೆಯಲ್ಲಿ ಮೂರನೇ ಬಾರಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ:ಬಳ್ಳಾರಿ, ತುಮಕೂರಿನಲ್ಲಿಂದು ಮೋದಿ ಮತಬೇಟೆ: ಬೆಂಗಳೂರಿನಲ್ಲಿ ರಸ್ತೆ ಸಂಚಾರ ಬದಲಾವಣೆ

ABOUT THE AUTHOR

...view details