ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಬದಲಾವಣೆ ಮಾಡಿ ಪಾರದರ್ಶಕವಾಗಿರುವ ಸ್ಪೀಕರ್ ನೇಮಿಸಿ ಎಂದು ರಾಜ್ಯಪಾಲರಿಗೆ ಹೈಕೋರ್ಟ್ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಸ್ಪೀಕರ್ ಬದಲಾವಣೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಹೈಕೋರ್ಟ್ ನ್ಯಾಯವಾದಿ ಪತ್ರ - ರಮೇಶ್ ಕುಮಾರ್
ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡ್ತಾ ಇದ್ರೆ ಸ್ಪೀಕರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸ್ಪೀಕರ್ ಅವರು ಚೇಂಬರ್ ನಲ್ಲಿಯೇ ಇರಬೇಕು. ಅದು ಬಿಟ್ಟು ಬೇರೆ ಕೆಲಸಗಳಲ್ಲಿ ಇದ್ರೆ ಹೇಗೆ ಎಂದು ಹೈಕೋರ್ಟ್ ನ್ಯಾಯವಾದಿ ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡ್ತಾ ಇದ್ರೆ ಸ್ಪೀಕರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಅನಿಸುತ್ತೆ. ಸ್ಪೀಕರ್ ಅವರು ಚೇಂಬರ್ನಲ್ಲಿಯೇ ಇರಬೇಕು. ಅದನ್ನು ಬಿಟ್ಟು ಬೇರೆ ಕೆಲಸಗಳಲ್ಲಿ ಇದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಯಾರಾದರು ಕೇಳಿದ್ರೆ ಅಲ್ಲಿದಿನಿ, ಇಲ್ಲಿದಿನಿ ಅಂತ ಹೇಳೋದು ಸರಿಯಿಲ್ಲ ಎಂದಿದ್ದಾರೆ.
ಸ್ಪೀಕರ್ಗೆ ಫೈನಲ್ ಜಡ್ಜ್ಮೆಂಟ್ ಕೊಡುವ ಹಕ್ಕಿದೆ. ಆದರೆ ಸ್ಪೀಕರ್ ಸರಿಯಾದ ರೀತಿ ಕೆಲಸ ಮಾಡ್ತಿಲ್ಲ. ಹೀಗಾಗಿ ಬೇರೆ ಸ್ಪೀಕರ್ ನೇಮಿಸಿ ಎಂದು ಹೈಕೊರ್ಟ್ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.