ETV Bharat Karnataka

ಕರ್ನಾಟಕ

karnataka

ETV Bharat / state

ಕೋವಿಡ್ ವ್ಯಾಕ್ಸಿನ್ ಕೇಂದ್ರಗಳ ಬದಲಾವಣೆ: ಸಿಬ್ಬಂದಿಗೆ ತರಬೇತಿ ಆರಂಭ - banglore covid vaccine news

ಬಿಬಿಎಂಪಿ ವ್ಯಾಪ್ತಿಯ ಮುಖ್ಯ ದಾಸ್ತಾನು ಕೇಂದ್ರ ಇರುವುದು ದಾಸಪ್ಪ ಆಸ್ಪತ್ರೆಯಲ್ಲಿ. ಇಲ್ಲಿ 8 ರಿಂದ 10 ಲಕ್ಷ ವ್ಯಾಕ್ಸಿನ್ ಡೋಸ್​ಗಳ ಶೇಖರಣೆಗೆ ಅವಕಾಶ ಇದೆ. 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೀಥಲ ವ್ಯವಸ್ಥೆ ಇರುವ ವಾಹನಗಳ ಮೂಲಕ ತಲುಪಿಸುವ ಕೆಲಸ ನಡೆಯುತ್ತದೆ. ಇಲ್ಲಿಂದ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಲಿದೆ. ಈಗಾಗಲೇ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳು ಲಸಿಕೆ ನೀಡುವ ಬಗ್ಗೆ ತರಬೇತಿ ಪಡೆದಿದ್ದಾರೆ ಎಂದು ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಹೇಳಿದ್ದಾರೆ.

ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ
ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ
author img

By

Published : Jan 6, 2021, 7:28 PM IST

ಬೆಂಗಳೂರು:ಕೋವಿಡ್ ಲಸಿಕೆ ವಿತರಣೆ ಸಂಬಂಧ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿಗಳು ತರಬೇತಿ ಪಡೆದಿದ್ದಾರೆ. ಈ ಕುರಿತು ಪಾಲಿಕೆ ಆರೋಗ್ಯಾಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಯಿತು.

ಈ ಸಭೆ ಕುರಿತು ಮಾತನಾಡಿದ ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಅವರು, ವ್ಯಾಕ್ಸಿನ್ ನೀಡುವ ದಿನಾಂಕ ಶೀಘ್ರವೇ ಲಭ್ಯವಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ಪ್ರಥಮ ಹಂತದಲ್ಲಿ ಲಸಿಕೆ ನೀಡಲಾಗುವುದು. ಪೂರ್ವಸಿದ್ಧತೆ ಬಗ್ಗೆ ಈಗಾಗಲೇ ಮುಖ್ಯ ಕಾರ್ಯದರ್ಶಿ ಜೊತೆ ಸಭೆ ನಡೆದಿದೆ ಎಂದರು.

ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ

ಬಿಬಿಎಂಪಿ ವ್ಯಾಪ್ತಿಯ ಮುಖ್ಯ ದಾಸ್ತಾನು ಕೇಂದ್ರ ಇರುವುದು ದಾಸಪ್ಪ ಆಸ್ಪತ್ರೆಯಲ್ಲಿ, ಇಲ್ಲಿ ಪೊಲಿಯೋ ಲಸಿಕೆಗಳನ್ನು ಕೂಡ ಶೇಖರಿಸಿಡಲಾಗುತ್ತಿತ್ತು. ಇಲ್ಲಿ 8 ರಿಂದ 10 ಲಕ್ಷ ವ್ಯಾಕ್ಸಿನ್ ಡೋಸ್​ಗಳ ಶೇಖರಣೆಗೆ ಅವಕಾಶ ಇದೆ. 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೀಥಲ ವ್ಯವಸ್ಥೆ ಇರುವ ವಾಹನಗಳ ಮೂಲಕ ತಲುಪಿಸುವ ಕೆಲಸ ನಡೆಯುತ್ತದೆ. ಇಲ್ಲಿಂದ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ತಲುಪಿಸುವ ಕೆಲಸ ನಡೆಯಲಿದೆ.

ವ್ಯಾಕ್ಸಿನೇಷನ್ ಕೇಂದ್ರಗಳ ಬದಲಾವಣೆ:

ಈ ಮೊದಲು ಶಾಲೆ, ಅಂಗನವಾಡಿಗಳನ್ನು ನೋಂದಣಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಇವುಗಳನ್ನು ಕೈ ಬಿಡಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಒಂದೇ ಕೊಠಡಿ ಇರುವುದರಿಂದ ಸಾಧ್ಯವಾಗುವುದಿಲ್ಲ. ವೈಟಿಂಗ್ ರೂಂ, ವ್ಯಾಕ್ಸಿನೇಷನ್‌ ರೂಂ, ಅಬ್ಸರ್ವೇಷನ್ ರೂಂ, ಅಗತ್ಯ ಇರುವುದರಿಂದ ಅಂಗನವಾಡಿಗಳನ್ನು ಹೊರಗಿಡಲಾಗಿದೆ. ಹಾಗಾಗಿ ಹೊಸ ಲಸಿಕಾ ಸ್ಥಳಗಳನ್ನು ಗುರುತಿಸಬೇಕಾಗಿದೆ. ನಾಳೆ ಈ ಬಗ್ಗೆ ಅಂತಿಮ ಸಭೆ ನಡೆಸಿ, ನರ್ಸಿಂಗ್, ಫಾರ್ಮಸಿ ಕೇಂದ್ರಗಳಲ್ಲೂ ವ್ಯಾಕ್ಸಿನೇಷನ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಆರೋಗ್ಯಾಧಿಕಾರಿ ವಿಜೇಂದ್ರ ಹೇಳಿದ್ದಾರೆ.

ಓದಿ: ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ತಡೆಗೋಡೆ, ಹೊಂಡಗಳ ನಿರ್ಮಾಣ: ಸಚಿವ ಆನಂದ್ ಸಿಂಗ್

ಸದ್ಯ 1507 ಸ್ಥಳಗಳನ್ನು ಗುರುತಿಸಿದ್ದು , ಇದರಲ್ಲಿ ಬದಲಾವಣೆ ಆಗಲಿದೆ. 1.67 ಲಕ್ಷ ಆರೋಗ್ಯ ಸಿಬ್ಬಂದಿಗೆ ಆರಂಭದಲ್ಲಿ ಲಸಿಕೆ ನೀಡಲಾಗುತ್ತದೆ. ಈ ಹಿನ್ನೆಲೆ 1,700 ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಡ್ರೈ ರನ್​​​ನಲ್ಲಿ ಎದುರಾದ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದು ಡಾ.ವಿಜೇಂದ್ರ ತಿಳಿಸಿದರು.

ವ್ಯಾಕ್ಸಿನ್ ಪಡೆದ ಬಳಿಕ ಆರೋಗ್ಯದಲ್ಲಿ ಏರುಪೇರಾದ್ರೆ ಏನು ಮಾಡುವುದು ?:

ವ್ಯಾಕ್ಸಿನೇಷನ್ ಬಳಿಕ ಅಡ್ಡಪರಿಣಾಮಗಳಾದರೆ ಪ್ರಥಮ ಚಿಕಿತ್ಸೆಗೆ ಕಿಟ್ ಇಡಲಾಗಿರುತ್ತದೆ. ಅದರಲ್ಲಿ ಎಲ್ಲಾ ತರಹದ ಮಾತ್ರೆ, ಇಂಜಕ್ಷನ್ ಲಭ್ಯ ಇರಲಿದೆ. ಅಲ್ಲದೆ ಪ್ರತಿ ಲಸಿಕೆ ಕೇಂದ್ರದ ಹತ್ತಿರದಲ್ಲಿ ವೈದ್ಯಕೀಯ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಒಂದು ಆ್ಯಂಬುಲೆನ್ಸ್ ಕೂಡ ನಿಗದಿ ಮಾಡಲಾಗಿದೆ. ಮೊದಲೇ ಸಿಬ್ಬಂದಿಗೆ ತಿಳಿಸಿರಲಾಗುತ್ತದೆ. ಲಸಿಕೆಗಳನ್ನು ಶೀತಲ ಸರಪಳಿ ವಾಹನಗಳ ಮೂಲಕ ನಿಗದಿತ ತಾಪಮಾನದಲ್ಲಿ ದಾಸ್ತಾನು ಮಾಡಿ, 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನೇಷನ್​ನ ಹಿಂದಿನ ದಿನ ರವಾನಿಸಲಾಗುತ್ತದೆ ಎಂದು ಡಾ. ವಿಜೇಂದ್ರ ತಿಳಿಸಿದರು.

ABOUT THE AUTHOR

...view details