ಬೆಂಗಳೂರು :ರೀಚ್-1 ವಿಸ್ತರಣಾ ಮಾರ್ಗದ ಮೂಲಕ ಬೈಯಪ್ಪನಹಳ್ಳಿ ನಿಲ್ದಾಣದಿಂದ ವೈಟ್ ಫೀಲ್ಡ್ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಹೀಗಾಗಿ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಎಲ್ಲಾ ನಮ್ಮ ಮೆಟ್ರೋ ರೈಲುಗಳ ನಿರ್ಗಮನ ಮತ್ತು ಆಗಮನವು ಪ್ಲಾಟ್ ಫಾರ್ಮ್ ಸಂಖ್ಯೆ 3 ರಿಂದ ಮಾತ್ರ ಇರಲಿದೆ.