ಬೆಂಗಳೂರು:ಬೆಂಗಳೂರು ನಗರ ಪೊಲೀಸ್ ಇಲಾಖೆಯ ವೆಬ್‌ಸೈಟ್ ವಿಳಾಸವನ್ನು ಸುರಕ್ಷತೆಯ ದೃಷ್ಟಿಯಿಂದ ಬದಲಾವಣೆ ಮಾಡಲಾಗಿದೆ. ಪೊಲೀಸ್ ಅಧಿಕೃತ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದರಿಂದ ವೆಬ್‌ಸೈಟ್ ವಿಳಾಸದಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಕುರಿತು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಈ ಮುನ್ನ ಬೆಂಗಳೂರು ನಗರ ಪೊಲೀಸರ ಅಧಿಕೃತ ಜಾಲತಾಣದ ವಿಳಾಸ www.bcp.gov.in ಇತ್ತು. ಆದರೆ ಇನ್ಮುಂದೆ ಈ ವಿಳಾಸ ಬದಲಾಗಲಿದೆ. ಕೆಲವೇ ದಿನಗಳಲ್ಲೇ ಬೆಂಗಳೂರು ನಗರ ಪೊಲೀಸರ ವೆಬ್ ಜಾಲತಾಣದ ವಿಳಾಸ www.bcp.karnataka.gov.in ಎಂದು ಬದಲಾಗಲಿದೆ.