ಕರ್ನಾಟಕ

karnataka

ETV Bharat / state

ಚಂದ್ರು ಕೊಲೆ ಪ್ರಕರಣ: ತನಿಖೆ ಸಿಬಿಐಗೆ ವಹಿಸುವಂತೆ ಜಮೀರ್ ಒತ್ತಾಯ - ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಜಮೀರ್ ಅಹಮದ್ ಖಾನ್

ಸಿಐಡಿ ತನಿಖೆಯಿಂದ ಏನು ಉಪಯೋಗ ಆಗುತ್ತದೆ ಎಂಬುದು ನನಗಂತೂ ಗೊತ್ತಾಗುತ್ತಿಲ್ಲ. ಯಾಕಂದ್ರೆ ಅವರ ಪಕ್ಷದವರೇ ಕಮಲ್ ಪಂತ್ ಸುಳ್ಳು ಹೇಳುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮೇಲೆಯೇ ಅವರು ಆರೋಪ ಮಾಡಿದ್ದಾರೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ಒತ್ತಾಯಿಸಿದ್ದಾರೆ.

ಶಾಸಕ ಜಮೀರ್ ಅಹಮದ್ ಖಾನ್
ಶಾಸಕ ಜಮೀರ್ ಅಹಮದ್ ಖಾನ್

By

Published : Apr 11, 2022, 10:17 PM IST

ಬೆಂಗಳೂರು:ಚಾಮರಾಜಪೇಟೆಯಲ್ಲಿ ನಡೆದ ಚಂದ್ರು ಕೊಲೆ ತನಿಖೆಯನ್ನು ಸಿಬಿಐಗೆ ಕೊಡಬೇಕು. ಸಿಐಡಿ ತನಿಖೆಯಿಂದ ಏನು ಉಪಯೋಗ ಆಗುತ್ತದೆ ಎಂಬುದು ನನಗಂತೂ ಗೊತ್ತಾಗುತ್ತಿಲ್ಲ ಎಂದು ಮಾಜಿ ಸಚಿವ ಹಾಗೂ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.


ಈ ಸಂಬಂಧ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಸಿಐಡಿ ತನಿಖೆಯಿಂದ ಏನು ಉಪಯೋಗ ಆಗುತ್ತದೆ ಎಂಬುದು ನನಗಂತೂ ಗೊತ್ತಾಗುತ್ತಿಲ್ಲ. ಯಾಕೆಂದರೆ, ಅವರ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ, ವಕ್ತಾರ ರವಿಕುಮಾರ್ ಏನು ಹೇಳಿಕೆ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಮಲ್ ಪಂತ್ ಸುಳ್ಳು ಹೇಳುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ಮೇಲೆಯೇ ಅವರು ಆರೋಪ ಮಾಡಿದ್ದಾರೆ. ತನಿಖೆ ಮಾಡುತ್ತಿದ್ದ ಪೊಲೀಸ್ ಇಲಾಖೆ ಮೇಲೆನೆ ಆರೋಪ ಮಾಡಿ, ಈಗ ಸಿಐಡಿಗೆ ತನಿಖೆ ಕೊಟ್ಟಿದ್ದಾರೆ.

ಇದನ್ನೂ ಓದಿ:ಚಂದ್ರು ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಕಮಲ್ ಪಂತ್ ಪತ್ರ, ಅಧೀಕೃತ ಆದೇಶ ಬಾಕಿ

ಸಿಐಡಿಯಲ್ಲಿ ತನಿಖೆ ಮಾಡುವವರು ಯಾರು? ಅವರೂ ಸ್ಥಳೀಯ ಪೊಲಿಸರೇ ತಾನೆ?. ಸಿಐಡಿ ತನಿಖೆಗೆ ಕೊಡುವುದರಿಂದ ಏನೂ ಉಪಯೋಗ ಆಗುವುದಿಲ್ಲ. ಇದರಿಂದ ಸತ್ಯಾಂಶ ಹೊರಗೆ ಬರುವುದಿಲ್ಲ. ಸತ್ಯಾಂಶ ಹೊರಗೆ ಬರಬೇಕು ಅಂದರೆ ಪ್ರಕರಣವನ್ನು ಸಿಬಿಐಗೆ ಕೊಡಿ. ಸಿಬಿಐ ತನಿಖೆಗೆ ಕೊಟ್ಟರೆ ಮಾತ್ರ ಸತ್ಯ ಹೊರಗೆ ಬರುತ್ತದೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.

For All Latest Updates

ABOUT THE AUTHOR

...view details