ಬೆಂಗಳೂರು:ನನ್ನ ಹೆಸರಿನಲ್ಲಿ ಬೇರೆ-ಬೇರೆ ವ್ಯಕ್ತಿಗಳಿಗೆ ವಾಟ್ಸ್ಆ್ಯಪ್ ಸಂದೇಶ ಕಳಿಸುತ್ತಿರುವ ಕಿಡಿಗೇಡಿಗಳು ಧನ ಸಹಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಆದ್ದರಿಂದ ನನ್ನ ಹೆಸರು ಬಳಸಿಕೊಂಡ ಹಣ ಕೇಳಿದರೆ ಯಾರೂ ಕೊಡಬೇಡಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.
ತಮ್ಮ ಹೆಸರಿನಲ್ಲಿ ಸೈಬರ್ ಖದೀಮರಿಂದ ವಂಚನೆ ಯತ್ನ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಯಲ್ಲಿ ಖುದ್ದು ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಂಡೀಗಢ, ಕೋಲ್ಕತ್ತಾದಲ್ಲಿರುವ ನನ್ನ ಸ್ನೇಹಿತರೊಬ್ಬರಿಗೆ ಹಣ ಕೇಳಿ ವಾಟ್ಸ್ಆ್ಯಪ್ ಸಂದೇಶ ಮಾಡಿದ್ದಾರೆ. ನಾನು ತೊಂದರೆಯಲ್ಲಿದ್ದೀನಿ, ಹಣದ ಸಹಾಯಬೇಕಿದೆ ಅಂದಿದ್ದಾರೆ ಎಂದು ಹೇಳಿದರು.