ಬೆಂಗಳೂರು: ಮಾದಕ ದ್ರವ್ಯ ಜಾಲದಲ್ಲಿ ಶಂಕಿತರೆಂದು ಹೇಳಲಾಗುತ್ತಿರುವ ಚಂದ್ರಕಾಂತ್ ಚೌವ್ಹಾಣ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಸ್ಪಷ್ಟಪಡಿಸಿದ್ದಾರೆ.
ಚಂದ್ರಕಾಂತ್ ಚೌವ್ಹಾಣ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಕ್ಯಾ. ಗಣೇಶ್ ಕಾರ್ಣಿಕ್ - Ganesh Karnik news
ಕಲಬುರಗಿಯ ಚಿಂಚೋಳಿ ತಾಲೂಕಿನ ಕಾಳಗಿ ಚಂದ್ರಕಾಂತ್ ಚೌವ್ಹಾಣ್ ಎಂಬುವರು ಬಿಜೆಪಿ ಚಿಹ್ನೆ ಇರುವ ಟೋಪಿ ಧರಿಸಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇವರು ಮಾದಕ ದ್ರವ್ಯ ಜಾಲದಲ್ಲಿ ಶಂಕಿತರೆಂದು ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ಯಾ.ಗಣೇಶ್ ಕಾರ್ಣಿಕ್ ಚಂದ್ರಕಾಂತ್ ಚೌವ್ಹಾಣ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
![ಚಂದ್ರಕಾಂತ್ ಚೌವ್ಹಾಣ್ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಕ್ಯಾ. ಗಣೇಶ್ ಕಾರ್ಣಿಕ್ ಬಿಜೆಪಿ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್](https://etvbharatimages.akamaized.net/etvbharat/prod-images/768-512-8769574-438-8769574-1599845341652.jpg)
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಾಳಗಿ ಚಂದ್ರಕಾಂತ್ ಚೌವ್ಹಾಣ್ ಎಂಬ ಒಬ್ಬರು ಬಿಜೆಪಿ ಚಿಹ್ನೆ ಇರುವ ಟೋಪಿ ಧರಿಸಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಚಂದ್ರಕಾಂತ ಚೌವ್ಹಾಣ್ ಅವರು ಮಾದಕ ದ್ರವ್ಯ ಜಾಲದಲ್ಲಿ ಶಂಕಿತರೆಂದು ಹೇಳಲಾಗುತ್ತಿದೆ. ಅವರು 2019ರ ಉಪಚುನಾವಣೆ ವೇಳೆ 'ಸ್ವಯಂ ಪ್ರೇರಿತರಾಗಿ ಆಗಮಿಸಿ ಪಕ್ಷದ ಚಿಹ್ನೆ ಇರುವ ಟೋಪಿ ಮತ್ತು ಶಾಲು ಧರಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಬಿಜೆಪಿಗೂ ಅವರಿಗೆ ಯಾವುದೇ ಸಂಬಂಧವಿಲ್ಲ ಮತ್ತು ಕಲಬುರಗಿ ಜಿಲ್ಲಾ ಘಟಕಕ್ಕೆ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಕ ತಿಳಿಸಿದ್ದಾರೆ.
ಇಂತಹ ಹೇಯ ಸಮಾಜ ಘಾತುಕ ಚಟುವಟಿಕೆಗಳ ವಿಚಾರದಲ್ಲಿ ಬಿಜೆಪಿ ಶೂನ್ಯ ಸಂಯಮ ಪ್ರದರ್ಶಿಸುತ್ತದೆ. ಯಾವುದೇ ವ್ಯಕ್ತಿ ಮಾದಕ ದ್ರವ್ಯ ಜಾಲದಲ್ಲಿ ತೊಡಗಿರುವುದು ಪತ್ತೆಯಾದರೆ, ನಿರ್ದಾಕ್ಷಿಣ್ಯವಾಗಿ ಅವರ ರಾಜಕೀಯ ಮತ್ತುಸಾಮಾಜಿಕ ನಂಟು ಸ್ಥಾನಮಾನದ ಹೊರತಾಗಿಯೂ ಕಾನೂನಿನ ರೀತಿ ಕ್ರಮ ಜರುಗಿಸುವಂತೆ ಪುನರುಚ್ಚರಿಸುತ್ತದೆ ಎಂದು ಡ್ರಗ್ಸ್ ಜಾಲದ ವಿಚಾರದಲ್ಲಿ ಪಕ್ಷದ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.