ಕರ್ನಾಟಕ

karnataka

ETV Bharat / state

ಮುಂದಿನ ಮೂರ್ನಾಲ್ಕು ದಿವಸ ಮಳೆಯಾಗುವ ಸಾಧ್ಯತೆ ಹೆಚ್ಚಿದೆ: ಸಿ.ಎಸ್.ಪಾಟೀಲ್

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದು, ಸೂರ್ಯನ ಕಿರಣ ಬೀಳುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಉಷ್ಣಾಂಶ ಇಳಿಕೆಯಾಗಬಹುದು. ಗರಿಷ್ಠ ಉಷ್ಣಾಂಶ 24ರಿಂದ 26 ಡಿಗ್ರಿ, ಕನಿಷ್ಠ ಉಷ್ಣಾಂಶ 16ರಿಂದ 18 ಡಿಗ್ರಿ ದಾಖಲಾಗಬಹುದು ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

C. S. Patil
ಸಿ ಎಸ್ ಪಾಟೀಲ್

By

Published : Jan 4, 2021, 8:26 PM IST

ಬೆಂಗಳೂರು: ಪೂರ್ವ ಅಲೆಗಳ ಪ್ರಭಾವದಿಂದ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರೆಯುವ ಸಾಧ್ಯತೆ ಇದ್ದು, ಮಳೆಯೂ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಸಿ.ಎಸ್.ಪಾಟೀಲ್
ಜನವರಿ-ಫೆಬ್ರವರಿ ಎರಡೂ ತಿಂಗಳು ಹವಾಮಾನದ ಪ್ರಕಾರ ಚಳಿಗಾಲ. ಈ ಅವಧಿಯಲ್ಲಿ ಪೂರ್ವದ ಅಲೆಗಳು ಚಲಿಸುತ್ತಿರುತ್ತವೆ. ಪೂರ್ವದಿಂದ ಪಶ್ಚಿಮದ ಕಡೆ ಚಲಿಸುವ ಗಾಳಿಗೆ ಪೂರ್ವದ ಅಲೆಗಳೆಂದು ಕರೆಯುತ್ತೇವೆ ಎಂದು ತಿಳಿಸಿದರು. ಸಾಮಾನ್ಯವಾಗಿ ಅಂಡಮಾನ್, ನಿಕೋಬಾರ್, ಶ್ರೀಲಂಕಾ, ಕನ್ಯಾಕುಮಾರಿ, ಮಾಲ್ಡಿವ್ಸ್ ಈ ಪ್ರದೇಶದಲ್ಲಿ ಗಾಳಿ ಚಲಿಸುತ್ತಿರುತ್ತದೆ. ಕೆಲವೊಮ್ಮೆ ಉತ್ತರದ ಕಡೆಯಲ್ಲೂ ಚಲಿಸುತ್ತದೆ. ಈ ವಿದ್ಯಾಮಾನದಿಂದ ಕರ್ನಾಟಕದಲ್ಲಿ ಜನವರಿ, ಫೆಬ್ರವರಿಯಲ್ಲಿ ಮಳೆಯಾಗುತ್ತದೆ ಎಂದರು.
ಸಿ.ಎಸ್.ಪಾಟೀಲ್
ಪೂರ್ವದ ಅಲೆಗಳಿಂದ ಮುಂದಿನ ನಾಲ್ಕು ದಿವಸಗಳಲ್ಲಿ ಉತ್ತರ ಒಳನಾಡು, ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆಯಾಗಬಹುದು. ಜನವರಿ 6 ಮತ್ತು 7ರಂದು ಮಳೆ ಪ್ರಮಾಣ ಜಾಸ್ತಿಯಾಗಿ ಬಹುತೇಕ ಎಲ್ಲಾ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಓದಿ:ಇನ್ಮುಂದೆ ನಿಜವಾದ ರಾಜಕಾರಣ ಆರಂಭವಾಗಲಿದೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಮುಂದುವರಿದು, ಸೂರ್ಯನ ಕಿರಣ ಬೀಳುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಉಷ್ಣಾಂಶ ಇಳಿಕೆ ಯಾಗಬಹುದು. ಗರಿಷ್ಠ ಉಷ್ಣಾಂಶ 24 ರಿಂದ 26 ಡಿಗ್ರಿ, ಕನಿಷ್ಠ ಉಷ್ಣಾಂಶ 16 ರಿಂದ 18 ಡಿಗ್ರಿ ದಾಖಲಾಗಬಹುದು ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ದಿವಸ ಮಳೆಯಾಗುವ ಸಾಧ್ಯತೆ ಇದ್ದು, ಶೀತ ವಾತಾವರಣ ಇನ್ನೂ ಮೂರು ನಾಲ್ಕು ದಿನ ಇರಬಹುದು. ತಂಪು ವಾತಾವರಣದಿಂದ ಶೀತ, ಜ್ವರ ಮತ್ತು ಕೋವಿಡ್ ಹೆಚ್ಚಾಗಬಹುದು ಎಂದು ಎಚ್ಚರಿಸಿದರು.

ದಕ್ಷಿಣ ಒಳನಾಡಿನಲ್ಲಿ ಇವತ್ತು, ನಾಳೆ ಮಳೆಯಾಗಬಹುದು. ಕರಾವಳಿ ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಮಳೆ ಆಗಬಹುದು. ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕೈದು ದಿವಸ ದಕ್ಷಿಣ ಒಳನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಹೆಚ್ಚಿದೆ ಎಂದು ತಿಳಿಸಿದರು. ಬೀದರ್, ಬಿಜಾಪುರ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ABOUT THE AUTHOR

...view details